ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳ ಶಯನ 
ರಾಜ್ಯ

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳ ಶಯನ, ಅವ್ಯವಸ್ಥೆಗೆ ಗ್ರಾಮಸ್ಥರ ಆಕ್ರೋಶ

ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳು ಬಂದು ಮಲಗುತ್ತಿದೆ! ಅಚ್ಚರಿ ಆದರೂ ಸತ್ಯ,ಇದು ಬಾಗಲಕೋಟೆ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರ ದುರವಸ್ಥೆ.

ಬಾಗಲಕೋಟೆ: ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿಗಳು ಬಂದು ಮಲಗುತ್ತಿದೆ! ಅಚ್ಚರಿ ಆದರೂ ಸತ್ಯ,ಇದು ಬಾಗಲಕೋಟೆ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯೊಂದರ ದುರವಸ್ಥೆ.
ಬಾಗಲಕೋಟೆ ಜಿಲ್ಲೆ ರಾಂಪುರ ಸರ್ಕಾರಿ ಆಸ್ಪತ್ರೆ ಈ ದುಸ್ಥಿತಿಗೆ ತಲುಪಿದೆ. ಇಲ್ಲಿ ಬೀದಿ ನಾಯಿಇಗಳದೇ ಆಟಾಟೋಪ. ರೋಗಿಗಳು ಮಲಗಬೇಕಿದ್ದ ಬೆಡ್ ಗಳ ಮೇಲೆ ತಾವು ಬಂದು ಮಲಗುತ್ತಿದೆ. ಆದರೆ ಇದನ್ನು ಯಾರೊಬ್ಬರೂ ಗಮನಿಸುವುದಕ್ಕೇ ಹೋಗಲ್ಲ.
ಆಸ್ಪತ್ರೆ ಬೆಡ್ ಮೇಲೆ ಚರ್ಮರೋಗಕ್ಕೀಡಾಗಿರುವ ನಾಯಿಗಳು ಮಲಗಿದ್ದರೂ ಆಸ್ಪತ್ರೆ ಸಿಬ್ಬಂದಿ ತಮಗೆ ಸಂಬಂಧವಿಲ್ಲದಂತೆ ಗಮನಿಸದೆ ಓದಾಡುತ್ತಿದ್ದಾರೆ.ಇದಕ್ಕಾಗಿ ಇಲ್ಲಿಗೆ ಚಿಕಿತ್ಸೆಗೆ ಬರಲು ಸಹ ಸಾರ್ವಜನಿಕರು ಭೀತಿಪಡುತ್ತಿದ್ದಾರೆ.
ಈ ಸಂಬಂಧ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಅವರು "ನಾವೇನು ಮಾಡೋಣ?" ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಇದರಿಂದ ಸಿಟ್ಟಿಗೆದ್ದಿರುವ  ಗ್ರಾಮಸ್ಥರು ಸಿಬ್ಬಂದಿಗಳ ವಿರುದ್ದ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!