ಸಾಂದರ್ಭಿಕ ಚಿತ್ರ 
ರಾಜ್ಯ

ಶಿವರಾಮ ಕಾರಂತರಿಂದ ರಿಷಭ್ ಶೆಟ್ಟಿಯವರೆಗೂ ಬೇಕು ಕುಂದಾಪುರ ಕನ್ನಡ!

ಆಗಸ್ಟ್ 1 ನೇ ದಿನಾಂಕವನ್ನು ಜಗತ್ತಿನಾದ್ಯಂತ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ, ಇಸ್ರೇಲ್, ಬಹರೈನ್ ಮತ್ತು ರಷ್ಯಾ ಸೇರಿದಂತೆ ...

ಬೆಂಗಳೂರು: ಆಗಸ್ಟ್ 1 ನೇ ದಿನಾಂಕವನ್ನು ಜಗತ್ತಿನಾದ್ಯಂತ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ, ಇಸ್ರೇಲ್, ಬಹರೈನ್ ಮತ್ತು ರಷ್ಯಾ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿರುವ  ಕುಂದಾಪುರ ಮೂಲದ ಜನತೆ ಈ ದಿನವನ್ನು ಆಚರಿಸುತ್ತಾರೆ.
ವಿಶ್ವ ಕುಂದಾಪುರ ದಿನ ಆಚರಿಸುವ ಐಡಿಯಾ ನೀಡಿದ್ದು ಸಾಂಸ್ಕೃತಿಕ ಚಿಂತಕ ಉದಯ ಶೆಟ್ಟಿ ಪಡುಕರೆ ಅವರ ತಂಡ, ಇವರು ಮೂಲತ ಕುಂದಾಪುರ ದವರಾಗಿದ್ದು, ಇದೊಂದು ಐಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು, ಅದಕ್ಕೆ ಭರಪೂರ ಪ್ರತಿಕ್ರಿಯೆಗಳು ಹರಿದು ಬಂದವು.
ಕನ್ನಡ ಭಾಷೆಯೇ ಮೊದಲ ಹೆಮ್ಮೆ,  ಕುಂದಾಪುರ ಕನ್ನಡದಲ್ಲಿ ಭಾವನೆಗಳನ್ನು ಒತ್ತಿ ಹೇಳುವುದರಿಂದ ಆ ಭಾಷೆ ಅನುಪಮಾವಾಗಿದೆ, ಆಗಸ್ಟ್ 1ನೇ ತಾರಿಖನ್ನು ವಿಶ್ವಾದ್ಯಂತ ಇರುವ ಕುಂದಾಪುರಿಗಳು ಆಚರಿಸುತ್ತಾರೆ.
ಕುಂದಾಪುರ ಕನ್ನಡ ರಂಗಭೂಮಿಯ ಹಲವು ನಾಟಕಗಳಿಗೆ ಸ್ಪೂರ್ತಿಯಾಗಿದೆ, ಜೊತೆಗೆ ಸಿನಿಮಾ, ಇಂಟರ್ನೆಟ್ ಜೋಕ್ಸ್, ಯೂಟ್ಯೂಬ್ ವಿಡಿಯೋಗಳಲ್ಲೂ  ಕುಂದಾಪುರ ಕನ್ನಡದ್ದೇ ಹವಾ, ಶಿವರಾಮ ಕಾರಂತರ ಕಾಲದಿಂದ ಇತ್ತೀಚಿನ ರಿಷಭ್ ಶೆಟ್ಟಿ ವರೆಗೂ ಕುಂದಾಪುರ ಕನ್ನಡ ಭಾಷೆಯನ್ನು ತಮ್ಮ ಸಂಭಾಷಣೆಯಲ್ಲಿ ಬಳಸಿಕೊಂಡಿದ್ದಾರೆ, ಉಳಿದವರು ಕಂಡಂತೆ ಸಿನಿಮಾದಲ್ಲಿ ಬಳಸಿರುವ ಭಾಷೆ ಎಲ್ಲರ ಮೆಚ್ಚುಗೆ ಗಳಿಸಿದೆ.
ಉಡುಪಿ ತಾಲೂಕಿನ ಸಣ್ಣ ಹಳ್ಳಿಯಾದ ಕುಂದಾಪುರದಿಂದ ನೂರಾರು ಮಂದಿ ಜಗತ್ತಿನ ವಿವಿಧ ಭಾಗಗಳಿಗೆ ವಿವಿಧ ಉದ್ದೇಶಗಳಿಗಾಗಿ ತೆರಳಿದ್ದಾರೆ, ಅವರು ಮಾತನಾಡುವ ಭಾಷೆಯಿಂದಾಗಿ ನಾವು ವಿದೇಶದಲ್ಲಿದ್ದರೂ ನಮಗೆ ಮನೆಯಲ್ಲಿಯೇ ಇರುವುದಾಗಿ ಭಾವನೆ ಬೆಳೆಯುತ್ತದೆ ಎಂದು ಹೊಟೇಲ್ ಉದ್ಯಮಿ ರಮಾನಾಥ ಶೆಟ್ಟಿ ಅಭಿಪ್ರಾಯ ಪಡುತ್ತಾರೆ.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ವಿವಿಧ ಶೈಲಿಗಳಲ್ಲಿ ಮಾತನಾಡುತ್ತಾರೆ, ಆದರೆ ಕುಂದಾಪುರ ಕನ್ನಡದಷ್ಟು ಆಕರ್ಷಣೆ ಮಾಡುವುದಿಲ್ಲ, ಕನ್ನಡ ಭಾಷೆಗಾಗಿ  ಕುಂದಾಪುರ ಮೂಲದ ಹಲವು ವ್ಯಂಗ್ಯ ಚಿತ್ರಕಾರರು,  ಕಲಾವಿದರು, ನಟ, ನಿರ್ದೇಶಕರು ಕೊಡುಗೆ ನೀಡಿದ್ದಾರೆ, ಇದೊಂದು ಅಪ್ರತಿಮ ಭಾಷೆ ಎಂದು ಜಿಕೆವಿಕೆ ಕಾಲೇಜು ವಿದ್ಯಾರ್ಥಿ ಸುರೇಶ್ ಶೆಟ್ಟಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test Day 3: ಫಾಲೋ ಆನ್ ಭೀತಿಯಲ್ಲಿ ಲಂಕಾಪಡೆ, ಮಳೆಯಿಂದಾಗಿ 3ನೇ ದಿನದಾಟ ಮೊಟಕು!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!