ಮತ್ತೆ 10 ಐಪಿಎಸ್ ಅಧಿಕಾರಿಗಳ ವರ್ಗಾವಣೆ-ರಾಜ್ಯ ಸರ್ಕಾರ ಆದೇಶ
ರಾಜ್ಯ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಆಡಳಿತ ವಿಭಾಗದ ಎಡಿಜಿಪಿಯಾಗಿರುವ ಡಾ.ಎ.ಪರಶಿವಮೂರ್ತಿ ಅವರನ್ನು ಬೆಂಗಳೂರು ಅಪರಾಧ ವಿಭಾಗದ ಎಡಿಜಿ ಮತ್ತು ಹೆಚ್ಚುವರಿ ಆಯುಕ್ತರಾಗಿ ವರ್ಗಾವಣೆಗೊಳಿಸಲಾಗಿದೆ.
ಅಪರಾಧ ವಿಭಾಗದ ಎಡಿಜಿಯಾಗಿದ್ದ ಡಾ.ಎಂ.ಅಬ್ದುಲ್ ಸಲೀಂ ಅವರನ್ನು ಆಡಳಿತ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿ ವರ್ಗಾಯಿಸಲಾಗಿದೆ.ಜತೆಗೆ ಹೆಸರಾಂತ ಪೋಲೀಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಅವರನ್ನು ಬೆಂಗಳುರು ಗ್ರಾಮಾಂತರ ಜಿಲ್ಲಾ ಪೋಲೀಸ್ ಅವರ್ಷ್ಟಾಧಿಕಾರಿಯಾಗಿ ನೇಮಿಸಲಾಗಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪೂರ್ಣ ಪಟ್ಟಿ ಹೀಗಿದೆ-
ಡಾ.ಎ.ಪರಶಿವಮೂರ್ತಿ-ಹೆಚ್ಚುವರಿ ಆಯುಕ್ತರು, ಸಿಸಿಬಿ, ಡಾ.ಎಂ.ಅಬ್ದುಲ್ ಸಲೀಂ-ಎಡಿಜಿಪಿ, ಆಡಳಿತ ವಿಭಾಗ, .ಡಾ.ಪಿ.ಎಸ್.ಹರ್ಷ-ಮಂಗಳೂರು ನಗರ ಪೊಲೀಸ್ ಆಯುಕ್ತ, .ಬಿ.ಆರ್.ರವಿಕಾಂತೇಗೌಡ-ಜಂಟಿ ಆಯುಕ್ತರು, ಟ್ರಾಫಿಕ್ ವಿಭಾಗ, ಕುಲ್ದೀಪ್ ಕುಮಾರ್ ಆರ್.ಜೈನ್ -ಡಿಸಿಪಿ ಅಪರಾಧ ವಿಭಾಗ, ಎಸ್.ಗಿರೀಶ್-ಕಮಾಂಡೆಂಟ್, ಕೆಎಸ್ಆರ್ಪಿ 9ನೇ ಬೆಟಾಲಿಯನ್, ರವಿ ಡಿ.ಚನ್ನಣ್ಣನವರ್-SP, ಬೆಂಗಳೂರು ಗ್ರಾಮಾಂತರ, .ಪಿ.ಹರಿಶೇಖರನ್-ಐಜಿಪಿ, ಕೆಎಸ್ಆರ್ಪಿ, ಅನುರಾಗ್ ಗಿರಿ-ಡಿಸಿಪಿ, ಮಂಗಳೂರು.ಮತ್ತು ಬಿ.ದಯಾನಂದ್-ಐಜಿಪಿ, ಅಪರಾಧ&ಆರ್ಥಿಕ ಅಪರಾಧಗಳ ತನಿಖಾ ದಳ.
ಇಷ್ಟೇ ಅಲ್ಲದೆ ಇಬ್ಬರು ಐಎ ಎಸ್ ಅಧಿಕಾರಿಗಳನ್ನು ಸಹ ವರ್ಗ ಮಾಡಲಾಗಿದ್ದು .ಡಾ.ಜಿ.ಸಿ.ಪ್ರಕಾಶ್ -ಆಯುಕ್ತರು, ಬಿಡಿಎ ಹಾಗೂ .ಡಾ. ಎಂ ವಿ ವೆಂಕಟೇಶ್ - ಜಿಲ್ಲಾಧಿಕಾರಿ, ಮಂಡ್ಯ ಆಗಿ ನೇಮಕ ಮಾಡಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.