ರಕ್ಷಣೆ ವೇಳೆ ಮುಗುಚಿದ ಬೋಟ್: 12 ಕಿ.ಮೀ ಈಜಿ ದಡ ಸೇರಿದ ಕಮಾಂಡರ್ ಚೇತನ್ ಕುಮಾರ್
ಹಂಪಿಯ ವಿರೂಪಾಪುರ ನಡುಗಡ್ಡೆಯಲ್ಲಿ "ಸಿಲುಕಿದ್ದವರ" ರಕ್ಷಿಸಲು ತೆರಳಿದ ಎನ್ಡಿಆರ್ಎಫ್ ದೋಣಿ ನೀರಿನ ಪ್ರವಾಹದ ರಭಸಕ್ಕೆ ಮಗುಚಿ ರಕ್ಷಣಾ ಸಿಬ್ಬಂದಿ ನೀರು ಪಾಲಾಗಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.
ಕೊಪ್ಪಳ: ಹಂಪಿಯ ವಿರೂಪಾಪುರ ನಡುಗಡ್ಡೆಯಲ್ಲಿ "ಸಿಲುಕಿದ್ದವರ" ರಕ್ಷಿಸಲು ತೆರಳಿದ ಎನ್ಡಿಆರ್ಎಫ್ ದೋಣಿ ನೀರಿನ ಪ್ರವಾಹದ ರಭಸಕ್ಕೆ ಮಗುಚಿ ರಕ್ಷಣಾ ಸಿಬ್ಬಂದಿ ನೀರು ಪಾಲಾಗಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ.
ದೋಣಿ ಮುಳುಗಿದ ಪರಿಣಾಮ ಐವರು ರಕ್ಷಣಾ ಸಿಬ್ಬಂದಿ ನೀರುಪಾಲಾಗಿದ್ದರು.ಅವರಲ್ಲಿ ಒಬ್ಬರು ಈಜಿ ದಡ ಸೇರಿದ್ದರು. ಉಳಿದವರನ್ನು ರಕ್ಷಿಸಲು ಸೇನಾ ಹೆಲಿಕಾಪ್ಟರ್ ನೆರವು ಕೋರಲಾಗಿತ್ತು.
ಹೆಲಿಕಾಪ್ಟರ್ ಮೂಲಕ ಶೋಧನೆ ನಡೆಸಿದಾಗ ನಾಲ್ವರು ರಕ್ಷಕರು ದೋಣಿ ಮುಳುಗಿದ ಸ್ಥಳದಲ್ಲಿಯೇ ಗಿಡವನ್ನು ಆಶ್ರಯಿಸಿ ನೀರಿನ ರಭಸದ ನಡುವೆಯೂ ಮೂರು ತಾಸುಗಳು ರಕ್ಷಣೆಗಾಗಿ ಕಾದಿದ್ದರು. ಬಳಿಕ ಅವರನ್ನೆಲ್ಲ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.
ಆದರೆ, ಮತ್ತೋರ್ವ ಎನ್ಡಿಆರ್ಎಫ್ಸಿಬ್ಬಂದಿ ಕೊಚ್ಚಿಕೊಂಡು ಹೋಗಿದ್ದು ಆತನಿಗಾಗಿ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸಿದಾಗ ಬೋಟ್ ಮುಳುಗಿದ 12 ಕಿ.ಮೀ ದೂರ ನೀರಿನ ರಭಸದ ಜೊತೆ ಈಜಿ ಕಮಾಂಡರ್ ಚೇತನ್ಕುಮಾರ್ ದಡ ಸೇರಿದ್ದಾರೆ. ಮತ್ತೆ ಜನರನ್ನು ರಕ್ಷಿಸಲು ಸಿದ್ಧನೆಂದು ವೀಡಿಯೋ ಮೂಲಕ ಸಂದೇಶ ರವಾನಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.