ರಾಜ್ಯ

ಕಾಂಗ್ರೆಸ್ ಮಾಜಿ ಶಾಸಕ ಉಮೇಶ್ ಭಟ್ ನಿಧನ

Srinivasamurthy VN

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಉಮೇಶ್ ಭಟ್ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಂಕೋಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಉಮೇಶ್ ಭಟ್ (70 ವರ್ಷ) ಅವರು ಇಂದು ಸಂಜೆ ವಿಧಿವಶರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಅಂಕೋಲದ ಬಾವಿಕೇರಿ ಗ್ರಾಮದ ಉಮೇಶ್ ಭಟ್ ಅವರು 1989ರ ವಿಧಾನಸಭಾ ಚುನಾವಣೆಯಲ್ಲಿ ಅಂಕೋಲ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 25122 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಅಂತೆಯೇ ಉಮೇಶ್ ಭಟ್ ಅವರು ಸಂಯುಕ್ತ ಕರ್ನಾಟಕ ಆಡಳಿತ ಮಂಡಳಿಯ ಟ್ರಸ್ಟಿಯಾಗಿದ್ದರು. ಈಗ ಅಂಕೋಲ ವಿಧಾನಸಭೆ ಕ್ಷೇತ್ರವಿಲ್ಲ. ಕ್ಷೇತ್ರ ಮರು ವಿಂಗಡನೆ ಸಂದರ್ಭದಲ್ಲಿ ಅಂಕೋಲ ಬೇರೆ-ಬೇರೆ ಕ್ಷೇತ್ರಗಳಿಗೆ ಹಂಚಿಕೆಯಾಗಿದೆ.

SCROLL FOR NEXT