ರಾಜ್ಯ

ಕರ್ನಾಟಕ ಪ್ರವಾಹ: 62 ವರ್ಷದ ಹಿರಿಯ ನಾಗರಿಕ ಚಾರ್ಮಾಡಿ ಘಾಟ್ ಹೀರೋ!

Shilpa D

ಚಾರ್ಮಾಡಿ: ಧೈರ್ಯಶಾಲಿ ಹಿರಿಯ ನಾಗರಿಕರೊಬ್ಬರು ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸೂಪರ್ ಹೀರೋ ಆಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ರಿಮೋಟ್ ಗ್ರಾಮದ ಅಬ್ದುಲ್ ಖಾದರ್(62) ಪ್ರವಾಹ ಸಂದರ್ಭದಲ್ಲಿ ರಕ್ಷಣಾ ತಂಡ ಆಗಮಿಸುವ ಮನ್ನ ಸುಮಾರು 16 ಮಂದಿಯನ್ನು ರಕ್ಷಿಸಿದ್ದಾರೆ.

ಚಾರ್ಮಾಡಿ ಗ್ರಾಮ ಪಂಚಾಯತ್ ಮಿತಿಯ ಕೋಲಾಂಬೆ ಗ್ರಾಮದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರು ಮತ್ತು ಜಾನುವಾರುಗಳನ್ನು ರಕ್ಷಿಸಲು ಸಮರೋಪಾದಿಯಲ್ಲಿ ಶ್ರಮಿಸಿದ್ದಾರೆ ಎಂದು ಪಂಚಲಿಂಗೇಶ್ವರ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಹೊಸಮಟ ಹೇಳಿದ್ದಾರೆ. 

ಖಾದರ್ ಫಾಲ್ಕನ್ ಮೋನು ಎಂದೇ ಪ್ರಸಿದ್ದರಾಗಿದ್ದಾರೆ,  ಸದ್ಯ ಪಂಚಲಿಂಗೇಶ್ವರ ಪ್ರವಾಹ ಸಂತ್ರಸ್ತರ ಸಹಾಯ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಕೆಲಸ, ವಿಧೇಯತೆ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ,

ಇಡೀ ಕೊಲಾಂಬೆ ಗ್ರಾಮವೇ ಪ್ರವಾಹದಲ್ಲಿ ಸಿಲುಕಿತ್ತು, ಹಲವು ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು., ಈ ವೇಳೆ ಹಲವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಸುರಕ್ಷಿತ ಸ್ಥಳಕ್ಕೆ ರವಾನಿಸಿದರು ಎಂದು ಮಹಮದ್ ರಫೀಕ್ ಹೇಳಿದ್ದಾರೆ.

62 ವರ್ಷದ ಅಬ್ದುಲ್ ಖಾದರ್ ಅವರ ಎನರ್ಜಿ ನೋಡಿ ನಮೆಗೆಲ್ಲಾ ಆಶ್ಚರ್ಯ ಉಂಟಾಯಿತು ಎಂದು ಹೇಳಿದ್ದಾರೆ, ಅಲ್ಲಾಹು ಅವರಿಗೆ ಇನ್ನಷ್ಟು ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಈ ವಯಸ್ಸಿನಲ್ಲಿ ಹೇಗೆ ಜನರನ್ನು ಹೆಗಲ ಮೇಲೆ ಹೊತ್ತಿಕೊಂಡು ಹೋಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಂದರ್ಭ  ಮತ್ತಷ್ಟು ಶಕ್ತಿಯನ್ನು ನೀಡುತ್ತದೆ ಎಂದು ಹೇಳಿರುವ ಅವರು ಸುಮಾರು 16 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾಗಿ ತಿಳಿಸಿದ್ದಾರೆ.

SCROLL FOR NEXT