ಪ್ರವಾಹ ಸಂತ್ರಸ್ತರು 
ರಾಜ್ಯ

ಪಿಯು ಮಂಡಳಿಯಿಂದ ನೆರೆ ಸಂತ್ರಸ್ತ ವಿದ್ಯಾರ್ಥಿಗಳಿಗೆ ಉಚಿತ ಅಂಕಪಟ್ಟಿ, ದಾಖಲೆ ಪೂರೈಕೆ

ನೆರೆಯಿಂದ ಅಂಕಪಟ್ಟಿ ಕಳೆದುಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. 

ಬೆಂಗಳೂರು: ನೆರೆಯಿಂದ ಅಂಕಪಟ್ಟಿ ಕಳೆದುಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. 

ನೆರೆಯಿಂದ ಅಂಕಪಟ್ಟಿ ಕಳೆದುಕೊಂಡು ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಂಕಪಟ್ಟಿ ಹಾಗೂ ಸಂಬಂಧಿತ ದಾಖಲೆಗಳನ್ನು ನೀಡುವುದಾಗಿ ಪ್ರಕಟಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಇಲಾಖೆ ನಿರ್ದೇಶಕರು, ನೆರೆ ಹಾಗೂ ಅತಿವೃಷ್ಠಿಯಿಂದ ಸಾರ್ವಜನಿಕರು ಆಸ್ತಿ, ಮನೆ ಸೇರಿದಂತೆ ಎಲ್ಲವನ್ನು ಕಳೆದುಕೊಂಡಿದ್ದಾರೆ. ಅಂತಹ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೊಸದಾಗಿ ಅಂಕಪಟ್ಟಿ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ವಿದ್ಯಾರ್ಥಿಗಳು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತೆರಳಿ ಹೊಸ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಬಳಿಕ ಹೊಸ ಅಂಕ ಪಟ್ಟಿಗಳು, ಇತರೆ ದಾಖಲೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮಂಡಳಿ ತಿಳಿಸಿದೆ.

ನೆರೆ ಪೀಡಿತ ಜಿಲ್ಲೆಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿ ದಿನಾಂಕವನ್ನು ಆಗಸ್ಟ್ 23 ವರೆಗೂ ವಿಸ್ತರಣೆ ಮಾಡಿದೆ. ಇದರ ಜೊತೆಗೆ ನೆರೆ ಸಂತಸ್ಥ ಜಿಲ್ಲೆಗಳ ಶೈಕ್ಷಣಿಕ-ಮೂಲಭೂತ ಸೌಕರ್ಯಗಳ ಹಾನಿಗೀಡಾಗಿದ್ದು, ಅಂತಹ ಜಿಲ್ಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ದಿಗಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಸಮಿತಿಗಳ ನೇಮಕ ಮಾಡಿ ಆದೇಶ ಹೊರಡಿಸಿದೆ. 

ಜಿಲ್ಲೆಯ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ 5 ಜನ ಪ್ರಾಂಶುಪಾಲರು ಒಳಗೊಂಡಿರುವ ಸಮಿತಿಯ  ಸದಸ್ಯರಾಗಲಿದ್ದಾರೆ. ಈ ಸಮಿತಿ ನೆರೆ ಜಿಲ್ಲೆಗಳ ಶೈಕ್ಷಣಿಕ, ಮೂಲಭೂತ ಸೌಕರ್ಯ  ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಮತ್ತೊಂದು ಬೆಳವಣಿಗೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವೂ ಸಹ ನೆರೆ ಹಾಗೂ ಅತಿವೃಷ್ಠಿ ಸಂತ್ರಸ್ಥರ ನೆರೆವಿಗೆ ಧಾವಿಸಿದ್ದು, 2019-20 ನೇ ಸಾಲಿನ ಶೈಕ್ಷಣಿಕ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿ ಶುಲ್ಕ ಮತ್ತು ದಂಡ ಶುಲ್ಕ ರಹಿತವಾಗಿ ಆಗಸ್ಟ್ ಅಂತ್ಯದವರೆಗೂ ತರಗತಿಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುವುದು ಎಂದು ಸುತ್ತೋಲೆ ಹೊರಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆಗೆ ವಿರೋಧ: ಪ್ರತಾಪ್ ಸಿಂಹಗೆ ಭಾರಿ ಹಿನ್ನಡೆ, PIL ವಜಾಗೊಳಿಸಿದ ಹೈಕೋರ್ಟ್!

ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ ಪ್ರಕರಣ: ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಕಾಲ ಮುಗಿದಿದೆ- ಟ್ರಂಪ್

ಗ್ರೇಟರ್ ಬೆಂಗಳೂರು ಚುನಾವಣೆಗೆ ಭದ್ರ ಬುನಾದಿ ಹಾಕುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್!

Asia Cup 2025: ಪ್ರೀತಿ ಇಲ್ಲದ ಮೇಲೆ ಯಾವ ಹ್ಯಾಂಡ್ ಶೇಕ್.. ಡ್ರೆಸ್ಸಿಂಗ್ ರೂಮ್ ಕಡೆ ಭಾರತೀಯರು! ಪಾಕ್ ಆಟಗಾರರಿಗೆ ಹೆಜ್ಜೆ ಹೆಜ್ಜೆಗೂ ನಿರಾಸೆ! Video

ರಾಜಕೀಯದಿಂದ ನಿವೃತ್ತಿಯಾಗಲ್ಲ, ಸಂಸತ್ತಿಗೂ ವೀಲ್‌ಚೇರ್‌ನಲ್ಲಿ ಹೋಗುತ್ತೇನೆ: ಎಚ್.ಡಿ ದೇವೇಗೌಡ

SCROLL FOR NEXT