ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಅರಮನೆಯಲ್ಲಿ ಗಜ ಪಡೆಗೆ ಅದ್ದೂರಿ ಸ್ವಾಗತ: ದಸರಾ‌ ಮಹೋತ್ಸವಕ್ಕೆ ದಿನಗಣನೆ 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಆಗಮಿಸಿದ ಮೊದಲ ತಂಡದ ಗಜ ಪಡೆಗೆ ಅರಮನೆಯ ಜಯಮಾರ್ಥಾಂಡ ದ್ವಾರದಲ್ಲಿ ಸೋಮವಾರ ಆತ್ಮೀಯ, ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಮೈಸೂರು ಪ್ರವೇಶಿಸಿದ ಗಜಪಡೆ
Sumana Upadhyaya
Updated On : 26 Aug 2019, 1:46 pm

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು  ಆಗಮಿಸಿದ  ಮೊದಲ ತಂಡದ ಗಜ ಪಡೆಗೆ ಅರಮನೆಯ ಜಯಮಾರ್ಥಾಂಡ ದ್ವಾರದಲ್ಲಿ ಸೋಮವಾರ ಆತ್ಮೀಯ, ಸಾಂಪ್ರದಾಯಿಕ  ಸ್ವಾಗತ ನೀಡಲಾಯಿತು. 


ಇದರೊಂದಿಗೆ ಮೈಸೂರು ನಗರದಲ್ಲಿ ದಸರಾ ಸಡಗರ, ಸಂಭ್ರಮ  ಇಂದಿನಿಂದಲೇ  ಗರಿಗೆದರಿದ್ದು,  ದಸರಾ‌ ಮಹೋತ್ಸವಕ್ಕೆ ದಿನಗಣನೆಯೂ ಆರಂಭವಾಗಿದೆ.

 
ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಅನೆಗಳಿಗೆ ಹೂಮಾಲೆ ಹಾಕಿ  ಸ್ವಾಗತ ಕೋರಿದರು. ಆರ್ಜುನ ನೇತೃತ್ವದ ಆರು ಆನೆಗಳು ಇಂದು ಅರಮನೆಗೆ ಆಗಮಿಸಿವೆ. 

Advertisement

Advertisement


ಉಗ್ರರ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲಿ ಹೈ ಅಲರ್ಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ  ಮೈಸೂರು ಅರಣ್ಯ ಭವನದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ದಸರಾ ಗಜಪಡೆ ಬಳಿ ಶ್ವಾನ ಹಾಗೂ ಬಾಂಬ್ ಸ್ಕ್ವಾಡ್ ನಿಂದ ಶೋಧ ನಡೆಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅರಣ್ಯ ಭವನದಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ.

ಅರಣ್ಯ ಭವನದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ‌ ಆನೆಗಳನ್ನು ಬೀಳ್ಕೊಡಲಾಯಿತು. ಅರಣ್ಯ ಭವನದಲ್ಲಿ ಪೂಜೆ ಮುಗಿದ ಬಳಿಕ ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ ಹಾಗೂ ಗನ್ ಹೌಸ್ ವೃತ್ತ ಮೂಲಕ ಗಜಪಡೆ ಸಾಗಿ  ಜಯಮಾರ್ಥಾಂಡ ದ್ವಾರದ ಮೂಲಕ ಅರಮನೆ ಅವರಣ ಪ್ರವೇಶ ಮಾಡಿತು.

ದಸರಾ ಗಜಪಡೆಯ ನೋಡಲು ಮುಗಿ ಬಿದ್ದ ಸಾರ್ವಜನಿಕರು: ರಸ್ತೆ ಮಾರ್ಗವಾಗಿ ಸುಮಾರು 12 ಗಂಟೆ ವೇಳೆಗೆ ಅರಮನೆಯನ್ನು ಗಡಪಡೆ ತಲುಪಲಿದೆ, ಇದೇ ಮೊದಲ ಬಾರಿ ದಸರಾ ಗಜಪಡೆಯಲ್ಲಿ ಭಾಗವಹಿಸಿರುವ ಆನೆ ಈಶ್ವರ ಪ್ರಮುಖ ಆಕರ್ಷಣೆಯಾಗಿತ್ತು. 
ಗಜಪಡೆ‌ಯನ್ನು ನೋಡಲು ದಾರಿಯುದ್ದಕ್ಕೂ ಸಾರ್ವಜನಿಕರು ರಸ್ತೆ ಇಕ್ಕೆಲಗಳಲ್ಲಿ ಸಾಲುಗಟ್ಟಿನಿಂತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement