ಸಾಂದರ್ಭಿಕ ಚಿತ್ರ 
ರಾಜ್ಯ

ಅನಾರೋಗ್ಯಕ್ಕೀಡಾಗಿದ್ದ ನವಜಾತ ಹೆಣ್ಣು ಶಿಶುವನ್ನು ಮೊದಲ ಮಹಡಿಯಿಂದ ಎಸೆದ ಅಜ್ಜಿ

ಅನಾರೋಗ್ಯದಿಂದ ಬಳಲುತ್ತಿದ್ದ ನವಜಾತ ಶಿಶುವನ್ನು  ಹುಟ್ಟಿದ ಮಗು ಹುಟ್ಟಿದ ಒಂಭತ್ತೇ ದಿನಕ್ಕೆ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನವಜಾತ ಶಿಶುವನ್ನು  ಹುಟ್ಟಿದ ಮಗು ಹುಟ್ಟಿದ ಒಂಭತ್ತೇ ದಿನಕ್ಕೆ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತಮಿಳ್ ಸೆಲ್ವಿ ಮಗುವನ್ನು ಕಳೆದುಕೊಂಡ ನತದೃಷ್ಟೆ. ಮಗುವಿನ ಅಜ್ಜಿ ಪರಮೇಶ್ವರಿ ಮೇಲೆ ಸೆಲ್ವಿ ಕೊಲೆಯ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸ್​ ಠಾಣೆಗೂ ದೂರು ನೀಡಿದ್ದಾರೆ.

“ನಿನ್ನೆ ರಾತ್ರಿ ಮಗುವಿಗೆ ಹಾಲುಣಿಸಿ ಆಟವಾಡಿಸುತ್ತಿದ್ದೆ. ಬಳಿಕ ಮಗುವನ್ನು ಅತ್ತೆ ಕೈಗೆ ಕೊಟ್ಟು ಅಡುಗೆ ಮನೆಗೆ ಹೋಗಿದ್ದೆ. ಬಂದು ನೋಡುವಷ್ಟರಲ್ಲಿ ಅತ್ತೆ ಕೈಯಲ್ಲಿ ಮಗು ಇರಲಿಲ್ಲ. ಮಗುವನ್ನ ಯಾರೋ ತೆಗೆದುಕೊಂಡು ಹೋಗಿದ್ದಾರೆ ಎಂದು ಅತ್ತೆ ಹೇಳಿದ್ದಳು. 

ಅಕ್ಕಪಕ್ಕದ ಮನೆ ಹಾಗೂ ಮನೆಯ ಸುತ್ತ ಹುಡುಕಾಟ ನಡೆಸಿದೆವು. ಈ ವೇಳೆ ಮನೆ ಹಿಂಭಾಗದಲ್ಲಿ ಮಗು ಬಿದ್ದಿತ್ತು,” ಎಂದು ಸೆಲ್ವಿ ದೂರಿನಲ್ಲಿ ತಿಳಿಸಿದ್ದಾರೆ.

ಮಗುವಿನ ಕತ್ತಿನ ಬಳಿ ಗಾಯದ ಗುರುತು ಪತ್ತೆಯಾಗಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋ ಶಂಕೆ ಇದೆ. ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಪ್ರಕರಣದ ಬಗ್ಗೆ ತಪ್ಪೊಪ್ಪಿಕೊಂಡಿರುವ ಪರಮೇಶ್ವರಿ ತನ್ನ ಮಗನ ಒಪ್ಪಿಗೆಯ ಮೇರೆಗೆ ಮಗವನ್ನು ಮೊದಲ ಮಹಡಿಯಿಂದ ಎಸೆದುಕೊಂದಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳು ನಾಡು ಮಹಿಳೆಯರಿಗೆ TVK ಮುಖ್ಯಸ್ಥ ವಿಜಯ್ ಭರಪೂರ ಘೋಷಣೆ: ಅಧಿಕಾರಕ್ಕೆ ಬಂದರೆ ಏನೇನು ಕೊಡ್ತಾರಂತೆ ನೋಡಿ!

ಅಲೆಗಳಿಗೇ ಸವಾಲು; ಪುರುಷರ ವೃತ್ತಿಯಲ್ಲಿ ಮಂಗಳೂರು ಯುವತಿ ದಿಟ್ಟ ಹೆಜ್ಜೆ: ಆಳ ಸಮುದ್ರ ಮೀನುಗಾರಿಕೆಯಲ್ಲಿ ಪ್ರಾಪ್ತಿ ಮೆಂಡನ್ ಸಾಧನೆ

ಅರ್ಧ ದಿನ ಆತಂಕ ಸೃಷ್ಟಿಸಿದ ಬಾಲಕ: ಕಾಣೆಯಾದ ಪೋರನಿಗಾಗಿ ಇಡೀ ಊರಿಗೆ ಊರೇ ಹುಡುಕಾಟ-ಆತಂಕ; ಕೊನೆಗೆ ಮನೆಯಲ್ಲೇ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆ..!

ಕೇಂದ್ರ ಸರ್ಕಾರ ಟ್ರಂಪ್‌ನ ಕೈಗೊಂಬೆಯಂತೆ ವರ್ತಿಸುತ್ತಿದೆ: ಸಚಿವ ಡಾ.ಎಂ.ಸಿ. ಸುಧಾಕರ್

SCROLL FOR NEXT