ರಾಜ್ಯ

ಸುಳ್ವಾಡಿ ವಿಷ ದುರಂತ ಪ್ರಕರಣ: ಸುಪ್ರೀಂ​ನಿಂದ ಇಮ್ಮಡಿ ಮಹದೇವ ಸ್ವಾಮೀಜಿ ಜಾಮೀನು ಅರ್ಜಿ ವಜಾ​

Lingaraj Badiger

ಚಾಮರಾಜನಗರ: ಕಿಚ್ಚುಗತ್ತಿ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಇಮ್ಮಡಿ ಮಹದೇವಸ್ವಾಮಿಯ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​​​ನ ತ್ರೀಸದಸ್ಯ ಪೀಠ ಸೋಮವಾರ ವಜಾ ಮಾಡಿದೆ. 

ಚಾಮರಾಜನಗರ ಸ್ಥಳೀಯ ಕೋರ್ಟ್‌ ಹಾಗೂ ರಾಜ್ಯ ಹೈಕೋರ್ಟ್ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಸುಪ್ರೀಂ ಮೆಟ್ಟಿಲೇರಿದ್ದ ಆರೋಪಿ ಸ್ವಾಮೀಜಿಗೆ ಈಗ ಜೈಲೇ ಗತಿ ಎನ್ನಲಾಗಿದೆ.

ನ್ಯಾ. ಎನ್.ವಿ ರಮಣ. ನ್ಯಾ. ಅಜಯ್ ರಸ್ಟೋಗಿ ಹಾಗೂ ನ್ಯಾ.ವಿ.ರಾಮಸುಬ್ರಮಣ್ಯ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಇಮ್ಮಡಿ ಮಹದೇವಸ್ವಾಮಿಗೆ ಜಾಮೀನು ನೀಡಲು ನಿರಾಕರಿಸಿದೆ.

ಕಳೆದ ನವೆಂಬರ್ 21 ರಂದು ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ  ಸಲ್ಲಿಸಿದ್ದ ಇಮ್ಮಡಿ ಮಹದೇವಸ್ವಾಮಿ ಪರವಾಗಿ ದುವಾ ಅಸೋಸಿಯೇಟ್ ವಾದ ಮಂಡನೆ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ 90 ದಿನಗಳ ತನಿಖೆ ನಡೆಸಿದ ತನಿಖಾಧಿಕಾರಿ ಡಿವೈಎಸ್ಪಿ ಪುಟ್ಟಮಾದಯ್ಯ ಚಾಮರಾಜನಗರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

-ವರದಿ ಗೂಳಿಪುರ ನಂದೀಶ ಎಂ

SCROLL FOR NEXT