ಬಂಧಿತ ತೇಜ್ ಸಿಂಗ್ 
ರಾಜ್ಯ

ಬೆಂಗಳೂರು: ಪತ್ನಿ ಕೊಂದು ಅಪಘಾತವಾಗಿದೆ ಎಂದು ಬಿಂಬಿಸಿದ್ದ ಪತಿಯ ಬಂಧನ

ತನ್ನ ಪತ್ನಿಯನ್ನು ಕಾರು ಹರಿಸಿ ಕೊಂದು ಬಳಿಕ ಅಪಘಾತವಾಗಿದೆ ಎಂದು ಬಿಂಬಿಸಿದ ಪತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರು: ತನ್ನ ಪತ್ನಿಯನ್ನು ಕಾರು ಹರಿಸಿ ಕೊಂದು ಬಳಿಕ ಅಪಘಾತವಾಗಿದೆ ಎಂದು ಬಿಂಬಿಸಿದ ಪತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪತ್ನಿಯನ್ನು ಜಾಲಿ ರೈಡ್‍ ಗೆಂದು ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಘಟನೆ ನವೆಂಬರ್ 16ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ತೇಜ್ ಸಿಂಗ್ ಬಂಧಿತ ಪತಿ. 27 ವರ್ಷದ ತೇಜ್ ಸಿಂಗ್ ಹಾಗೂ ಆತನ ಪತ್ನಿ ದೀಪಲ್ ಕಂವಾರ್(27) ಮೂಲತಃ ರಾಜಸ್ಥಾನದವರಾಗಿದ್ದು, ಚಿಕ್ಕ ಚಿನ್ನದ ಮಳಿಗೆ ಹೊಂದಿದ್ದರು. ಹುಣಿಸೇಮಾರನಹಳ್ಳಿ ಬಳಿಯ ಜನತಾ ಕಾಲೋನಿಯಲ್ಲಿ ವಾಸವಿದ್ದರು. 

ಕೌಟುಂಬಿಕ ವಿಚಾರವಾಗಿ ಪತ್ನಿ ಜತೆ ಜಗಳವಾಡುತ್ತಿದ್ದ ತೇಜ್ ಸಿಂಗ್ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ ನ.16ರಂದು ತೇಜ್‌ಸಿಂಗ್‌, ತನ್ನ ಸ್ನೇಹಿತ ಗುರುಪ್ರೀತ್‌ ಸಿಂಗ್‌ ಹೆಸರಿನಲ್ಲಿ ಬಾಡಿಗೆ ಕಾರು ಬುಕ್‌ ಮಾಡಿಸಿದ್ದ. ಬಳಿಕ ತೇಜ್‌ ಮನೆಗೆ ಗುರು ಕಾರು ತಂದು ಬಿಟ್ಟು ತೆರಳಿದ್ದ. ಅಮೃತಹಳ್ಳಿ ಸಮೀಪ ಹೋಟೆಲ್‌ಗೆ ಅಂದು ರಾತ್ರಿ ಊಟಕ್ಕೆ ಪತ್ನಿ ಹಾಗೂ ಸ್ನೇಹಿತರಾದ ಶಂಕರ್‌ಸಿಂಗ್‌ ಮತ್ತು ಭರತ್‌ಸಿಂಗ್‌ ಜತೆ ತೇಜ್‌ ಹೋಗಿದ್ದ. ಆ ವೇಳೆ ಸ್ನೇಹಿತರ ಜತೆ ಸೇರಿ ಕಂಠಮಟಾ ಮದ್ಯ ಸೇವಿಸಿದ ತೇಜ್‌, ಪತ್ನಿಗೂ ಬಲವಂತವಾಗಿ ಮದ್ಯಪಾನ ಮಾಡಿಸಿದ್ದ. ನಂತರ ಸ್ನೇಹಿತರನ್ನು ಅವರ ಮನೆಗೆ ಬಿಟ್ಟು, ರಾತ್ರಿ 12.20ರ ಸುಮಾರಿಗೆ ಪತ್ನಿಯನ್ನು ದೇವನಹಳ್ಳಿ ರಸ್ತೆಗೆ ಕರೆ ತಂದಿದ್ದಾನೆ. ಪಾನಮತ್ತಳಾಗಿ ನಿದ್ರೆಗೆ ಜಾರಿದ್ದ ಪತ್ನಿಯನ್ನು ತೇಜ್‌, ಬಚ್ಚಳ್ಳಿ ಗೇಟ್‌ ಸಮೀಪ ಕಾರು ಚಲಿಸುವಾಗಲೇ ಬಾಗಿಲು ತೆರೆದ ಪರಿಣಾಮ ಆಕೆ ಕೆಳಗೆ ಬಿದ್ದಿದ್ದಳು. ಆಗ ಕಾರನ್ನು ರಿವರ್ಸ್‌ ಮಾಡಿಕೊಂಡು ಬಂದ ತೇಜ್‌, ರಸ್ತೆ ಬದಿ ಉರುಳಿದ್ದ ಪತ್ನಿ ಮೇಲೆ ಹರಿಸಿ ಭೀಕರವಾಗಿ ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

Ind Vs SL: ಮಾನವ್ ಸುತಾರ್ ದಾಖಲೆ; 600ನೇ ಟೆಸ್ಟ್ ಪಂದ್ಯದ ಗೆದ್ದು ಸಂಭ್ರಮಿಸಿದ ಟೀಂ ಇಂಡಿಯಾ!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಹುಡುಗಿ!

ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA!