ರಾಜ್ಯ

ಅರಣ್ಯ ಭೂಮಿ ಆಕ್ರಮಿಸಿಕೊಂಡು, ಅಂಬೇಡ್ಕರ್ ಪುತ್ಹಳಿ ಪ್ರತಿಷ್ಠಾಪಿಸಿದ ಗ್ರಾಮಸ್ಥರು!

Nagaraja AB

ಚಿಕ್ಕಮಗಳೂರು: ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಮಲೆ ನಾಡು ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಭೂ ರಹಿತ ಜನರ ನಡುವಿನ ಘರ್ಷಣೆ ಸರ್ವೆ ಸಾಮಾನ್ಯವಾಗಿದೆ.

ಫಾರಂ ನಂಬರ್ 50, 51 ಮತ್ತು 57 ರಲ್ಲಿ ಭೂಮಿಯನ್ನು ಪಡೆಯಲು ಕಂದಾಯ, ಅರಣ್ಯಾಧಿಕಾರಿಗಳೊಂದಿಗೆ ಭೂ ರಹಿತ ಬಡವರು ಹೋರಾಟ ಮಾಡುತ್ತಿದ್ದಾರೆ .ಆದರೆ, ತಾಂತ್ರಿಕ ದೋಷದ ಆಧಾರದ ಮೇಲೆ ಅನೇಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 

ಕೆಲ ತಿಂಗಳ ಹಿಂದೆ ಬಾಳೆಹೊನ್ನೂರು ಹೋಬಳಿಯ ಸೀಗೊಡು ಬಳಿ ಭೂಮಿಯನ್ನು ಕಾನೂನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದ ದಲಿತರು ಅರಣ್ಯ ಭೂಮಿಯಲ್ಲಿ ತಾತ್ಕಾಲಿಕ ಶೆಡ್ ಗಳನ್ನು ಹಾಕಿದ್ದರು. ಆದರೆ, ಅರಣ್ಯಾಧಿಕಾರಿಗಳು ಅವುಗಳನ್ನು ತೆರವುಗೊಳಿಸಿ ತಂತಿ ಬೇಲಿ ಹಾಕುವ ಮೂಲಕ ರಕ್ಷಿಸಿದರು.

ಇದೇ ರೀತಿಯಲ್ಲಿ ಸೋಮವಾರ 60 ಜನರ ಗುಂಪೊಂದು ಅರಣ್ಯ ವಲಯಕ್ಕೆ ಲಗ್ಗೆ ಇಟ್ಟಿದ್ದು, ಟೆಂಟ್ ಹಾಕಿ ಅಂಬೇಡ್ಕರ್ ಪುತ್ಹಳಿಯನ್ನು ಪ್ರತಿಷ್ಠಾಪಿಸಿದ್ದಾರೆ.ಮಲ್ಲೆನಹಳ್ಳಿ ವಿಭಾಗದ ಅರಿಸಿನಗುಪ್ಪೆಯಲ್ಲಿನ ಸರ್ವೆ ನಂಬರ್ 52ರಲ್ಲಿ  275 ಎಕರೆ ಅರಣ್ಯ ಭೂಮಿಯಿದೆ. ಡಿಎಸ್ ಎಸ್ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ ಲಕ್ಷ್ಮೀಪುರ ನಿವಾಸಿಗಳು ಅಕ್ರಮವಾಗಿ ಅರಣ್ಯ ವಲಯಕ್ಕೆ ಪ್ರವೇಶಿಸಿದ್ದು, ಟೆಂಟ್ ಗಳನ್ನು ಹಾಕಿದ್ದಾರೆ.

ಕೂಡಲೇ ವಿಭಾಗೀಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚುರ್ಚೆ ಗುಡ್ಡಾ ಜಲಪಾತವಿರುವ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯೇತರ ಚಟುವಟಿಕೆ ಕೈಗೊಳ್ಳದಂತೆ ಪ್ರತಿಭಟನಾಕಾರರಿಗೆ ಹೇಳಿದ್ದಾರೆ.ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ  ಹಾಗೂ ಪ್ರತಿಭಟನಾಕಾರರು ನಡುವೆ ವಾಗ್ವಾದ ಉಂಟಾಗಿದೆ.

ಆರ್ ಎಫ್ ಒ ಶಿಪ್ಪಾ ಹಾಗೂ ಕಂದಾಯ ನಿರೀಕ್ಷಕರು ಎಷ್ಟೇ ಮನವೊಲಿಸಿದರು ಪಟ್ಟು ಸಡಿಲಿಸದ ಪ್ರತಿಭಟನಾಕಾರರು , ನಮಗೆ ಈ ಜಾಗ ನೀಡುವವರೆಗೂ ಕದಲುವುದಿಲ್ಲ ಎನ್ನುತ್ತಿದ್ದಾರೆ. 

SCROLL FOR NEXT