ರಾಜ್ಯ

ಕಲಬುರಗಿ: ಮದುವೆ ಸಂಭ್ರಮದಲ್ಲಿ ಸಖತ್ ಸ್ಟಂಟ್ ಮಾಡುತ್ತಲೆ ಪ್ರಾಣ ಬಿಟ್ಟ ಯುವಕ!

Vishwanath S

ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ಯುವಕನೋರ್ವ ಸಖತ್ ಡ್ಯಾನ್ಸ್ ಸ್ಟೇಪ್ ಹಾಕುತ್ತಲೇ  ಪ್ರಾಣ ಬಿಟ್ಟಿರುವ ವಿಡಿಯೋ ಒಂದು ವೈರಲ್ ಆಗಿದೆ.

24 ವರ್ಷದ ಅಶೋಕ್ ಎಂಬ ಯುವಕ ಮೃತಪಟ್ಟಿದ್ದು,  ಜಿಲ್ಲೆಯ ಚಿತ್ತಾಪುರ ತಾಲೂಕಿನ ಹೊಸೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನವೆಂಬರ್ 30ರಂದು ಅಶೋಕ್ ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳುವ ಮೂಲಕ ಮೆರವಣಿಗೆ ವೇಳೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದನು. ಅಲ್ಲದೇ ಈ ವೇಳೆ ಆತ ಸ್ಟಂಟ್ ಮಾಡಿ ಹೆಜ್ಜೆ ಹಾಕಿದ್ದನು.

SCROLL FOR NEXT