ಗೌರಿ ಲಂಕೇಶ್ ಟ್ರಸ್ಟ್ ನ 7 ಕೋಟಿ ರೂ ಹಣದ ಬಗ್ಗೆ ತನಿಖೆಯಾಗಲಿ: ಇಂದ್ರಜಿತ್ ಲಂಕೇಶ್
ಗೌರಿ ಲಂಕೇಶ್ ಟ್ರಸ್ಟ್ ನಲ್ಲಿ ಅಕ್ರಮ ನಡೆದಿದ್ದು ಇದರಲ್ಲಿ ಸಂಗ್ರಹಿಸಲಾದ 7 ಕೋಟಿ ರೂ ಹಣದ ಬಗ್ಗೆ ಕೂಡಲೇ ಸರ್ಕಾರದಿಂದ ತನಿಖೆ ನಡೆಸಬೇಕು ಎಂದು ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಬೆಂಗಳೂರು: ಗೌರಿ ಲಂಕೇಶ್ ಟ್ರಸ್ಟ್ ನಲ್ಲಿ ಅಕ್ರಮ ನಡೆದಿದ್ದು ಇದರಲ್ಲಿ ಸಂಗ್ರಹಿಸಲಾದ 7 ಕೋಟಿ ರೂ ಹಣದ ಬಗ್ಗೆ ಕೂಡಲೇ ಸರ್ಕಾರದಿಂದ ತನಿಖೆ ನಡೆಸಬೇಕು ಎಂದು ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನ್ನ ಅಕ್ಕ ಹಾಗೂ ನನ್ನ ಹೆಸರು ಕೇಳಿ ಬಂದಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದು, ಟ್ರಸ್ಟಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದರು.
ತಮ್ಮ ತಂದೆ ಪ್ರಾರಂಭಿಸಿದ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಮಾಧ್ಯಮ ಆಯ್ತು, ಸಿನಿಮಾ ಆಯ್ತು ಎಂದು ನನ್ನ ಪಾಡಿಗೆ ನಾನು ಇದ್ದೇನೆ. ಟ್ರಸ್ಟ್ ನಲ್ಲಿ ಯಾರು ಹಣ ಸಂಗ್ರಹಿಸುತ್ತಿದ್ದಾರೆ. ಇದರ ಉದ್ದೇಶ ಏನು ಎಂದು ತಿಳಿಯಬೇಕಿದೆ.
ಕವಿತಾ ಲಂಕೇಶ್ ಹೇಳಿಕೆಗೂ ನನಗೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಆದ್ದರಿಂದ ಈ ಕುರಿತು ಸಂಪೂರ್ಣವಾಗಿ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.