ರಾಜ್ಯ

ರಾಹುಲ್ ಗಾಂಧಿ ಪ್ರಮುಖ ಎದುರಾಳಿ ಆಗಿದಿದ್ದರೆ ಮೋದಿಯವರು ಇಂದು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ: ರಾಮಚಂದ್ರ ಗುಹಾ

Sumana Upadhyaya

ಬೆಂಗಳೂರು: ಭಾರತ ದೇಶದಲ್ಲಿ ಸದ್ಯ ರಾಷ್ಟ್ರವಾದದ ಬದಲಿಗೆ ಅತಿರೇಕದ ರಾಷ್ಟ್ರಪ್ರೇಮ ಅಬ್ಬರ ಕಂಡುಬರುತ್ತಿದ್ದು ಇದು ದೇಶಕ್ಕೆ ಮಾರಕ, ರಾಹುಲ್ ಗಾಂಧಿ ಪ್ರಮುಖ ಎದುರಾಳಿಯಾಗಿದಿದ್ದರೆ ಇಂದು ನರೇಂದ್ರ ಮೋದಿಯವರು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.


ಅವರು ನಿನ್ನೆ ಬೆಂಗಳೂರಿನಲ್ಲಿ ಭಾರತದ ಬಹುತ್ವತೆ:ಭೂತ, ವರ್ತಮಾನ ಮತ್ತು ಭವಿಷ್ಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಷ್ಟ್ರೀಯತೆ ಮತ್ತು ಅತಿರೇಕದ ರಾಷ್ಟ್ರಪ್ರೇಮದ ನಡುವಿನ ವ್ಯತ್ಯಾಸವನ್ನು ಹೇಳಿದರು. ರಾಷ್ಟ್ರಪ್ರೇಮ ಪ್ರೀತಿ ಮತ್ತು ಅರ್ಥೈಸುವಿಕೆಯಿಂದ ಪ್ರೇರೇಪಿತವಾದರೆ ಅತಿರೇಕದ ಅಬ್ಬರದ ದೇಶಪ್ರೇಮ ದ್ವೇಷ ಮತ್ತು ರಕ್ಷಣೆಯಿಂದ ಪ್ರೇರೇಪಿತವಾದಂತದ್ದು ಎಂದರು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಂತಹ ವಿಷಯಗಳು ಇಂದು ಮೂಲೆಗುಂಪಾಗಿದೆ ಎಂದರು.


ಎಡಪಂಥೀಯರ ಅಬ್ಬರದ ದೇಶಪ್ರೇಮ ಮತ್ತು ಬೂಟಾಟಿಕೆ ಪ್ರವೃತ್ತಿಯಿಂದ ಭಾರತಕ್ಕಿಂತ ಬೇರೆ ದೇಶವನ್ನು ಹೆಚ್ಚು ಪ್ರೀತಿಸುತ್ತಿದ್ದಾರೆ. ನೆರೆ ರಾಷ್ಟ್ರಗಳಲ್ಲಿನ ಇಸ್ಲಾಂ ಮೂಲಭೂತವಾದಿತ್ವ ಮತ್ತು ಅಬ್ಬರದ ದೇಶಭಕ್ತಿ ಜಾಗತಿಕ ಸನ್ನಿವೇಶವಾಗಿದ್ದು ಅದು ಭಾರತಕ್ಕೆ ಕೂಡ ವ್ಯಾಪಿಸಿದೆ. ಒಬ್ಬ ನಿಜವಾದ ದೇಶಭಕ್ತ ತನ್ನ ದೇಶವನ್ನು ಅಪಾರವಾಗಿ ಪ್ರೀತಿಸಿ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಬೆಂಬಲಿಸಬೇಕು. ಹಿಂದುತ್ವ ದೇಶಭಕ್ತಿಯಲ್ಲ. ಅದು ಒಂದು ಧರ್ಮ, ಭಾಷೆ ಮತ್ತು ಈಗ ಒಬ್ಬ ನಾಯಕನ ಪರವಾಗಿ ಭಾರತೀಯ ಬಹುತ್ವವನ್ನು ಆಳಿಸಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು.


ತನ್ನ ದೇಶ ವಿಫಲಗೊಂಡಾಗ ನಾಚಿಕೆಪಡುವವನು, ಒಬ್ಬನ ಧರ್ಮಕ್ಕೆ ತಾರತಮ್ಯ ತೋರಿದಾಗ ಖಿನ್ನತೆಗೆ ಒಳಗಾಗುವನು, ಭಾಷೆ, ಧರ್ಮ ಮತ್ತು ರಾಷ್ಟ್ರ ಒಬ್ಬನಿಗೆ ಮಾತ್ರ ಸೀಮಿತವಲ್ಲ, ಎಲ್ಲರಿಗೂ ಸೇರಿದ್ದು ಎಂದು ಹೇಳುವವನು ನಿಜವಾದ ದೇಶಭಕ್ತ. ಧರ್ಮ, ದೇಶ ಮತ್ತು ಭಾಷೆ ಬಂದಾಗ ಏಕತೆ, ಒಗ್ಗಟ್ಟು ತೋರಿಸುವವನು ನಿಜವಾದ ದೇಶಭಕ್ತ. ಇಂದಿನ ಪರಿಸ್ಥಿತಿಯಲ್ಲಿ ವ್ಯಕ್ತಿ ತಪ್ಪು ಮಾಡಿದಾಗ ಕ್ಷಮೆ ಕೇಳದಿರುವ ಸನ್ನಿವೇಶವಿದೆ ಎಂದು ನೋಟು ಅನಾಣ್ಯೀಕರಣದಿಂದ ಆದ ತಪ್ಪಿಗೆ ಪ್ರಧಾನಿ ಜನರ ಕ್ಷಮೆ ಕೇಳದಿರುವ ಬಗ್ಗೆ ಕುಟುಕಿದರು. 

SCROLL FOR NEXT