ರಾಜ್ಯ

ರಾಜ್ಯಾದ್ಯಂತ ಸಿಎಎ ವಿರೋಧಿ ಪ್ರತಿಭಟನೆ: ಗೃಹ ಸಚಿವ ಬೊಮ್ಮಾಯಿಗೆ ಅಗ್ನಿಪರೀಕ್ಷೆ

Shilpa D

ಬೆಂಗಳೂರು:  ಮಂಗಳೂರು ಗಲಭೆ ಹಾಗೂ ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾನುವಾರ ಉನ್ನತ  ಪೊಲೀಸ್ ಅಧಿಕಾರಿಗಳ ಜೊತೆ ಮ್ಯಾರಾಥಾನ್ ಸಭೆ ನಡೆಸಿದರು.

ಡಿಜಿಪಿ ನಿಲಮಣಿ ರಾಜು. ಆಯುಕ್ತ ಭಾಸ್ಕರ್ ರಾವ್, ಎಡಿಜಿಪಿ ಕಮಲ್ ಪಂತ್ ಸೇರಿದಂತೆ ಬೊಮ್ಮಾಯಿ ಸಭೆ ನಡೆಸಿದರು. ನಾನೇ ಖುದ್ದಾಗಿ  ಎಲ್ಲಾ ಪರಿಸ್ಥಿತಿಗಳನ್ನು ಪರಿಶೀಲಿಸುತ್ತೇನೆ, ನಿಮಿಷ ನಿಮಿಷಕ್ಕೂ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು  ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಮಗೆ ಯಾವುದೇ ರೀತಿಯ ಭಯವಿಲ್ಲ, ಇವತ್ತಿನವರೆಗೂ ಪರಿಸ್ಥಿತಿ ಸಹಜವಾಗಿಯೇ ಇದೆ, ಕಚೇರಿಗಳು, ಶೈಕ್ಷಣಿಕ ಸಂಸ್ಥೆಗಳು ಎಲ್ಲವೂ ಶಾಂತಿಯುತವಾಗಿಯೇ ಇವೆ
ನಿಷೇದಾಜ್ಞೆ ಒಂದು ಮುಂಜಾಗ್ರಾತಾ ಕ್ರಮವಾಗಿದೆ,  ಪೊಲೀಸರು ಅವರ ಕೆಲಸ ಮಾಡುತ್ತಿದ್ದಾರೆ, ಪೊಲೀಸರಿಗೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಸಿದ್ದೇವೆ.

ಜನರಲ್ಲಿರುವ ಭಯವನ್ನು ಹಾಗೂ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು  ಪ್ರಯತ್ನಿಸುತ್ತಿದ್ದೇವೆ, ಮಸೀದಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಿಗ  ಪತ್ರ ಮುಖೇನ ಇರುವ ಭಯವನ್ನು ಹೋಗಲಾಡಿಸಲು ಎಲ್ಲಾ ಅಗತ್ಯ ಕ್ರಮ ಕೈತೆಗೆದುಕೊಂಡಿದ್ದೇವೆ.

ಸೋಮವಾರದ ರ್ಯಾಲಿಗೆ ಪೊಲೀಸರು ಸೂಕ್ತ ಭದ್ರತೆ ಕೈಗೊಂಡಿದ್ದಾರೆ, ನಾವು ಡ್ರೋಣ್ ಕ್ಯಾಮೆರಾ ಮತ್ತು ಸಿಸಿಟಿವಿ ಹಾಗೂ ಪೊಲೀಸರನ್ನು ನಿಯೋಜಿಸಿದ್ದೇವೆ, ಮುಸ್ಲಿಂ ಸಂಘಟನೆಗಳು ಸಮಾವೇಶ ನಡೆಸುತ್ತಿರುವ  ಖುದ್ದೂಸ್ ಸಾಹೇಬ್ ಈದ್ಗಾ ಮೈದಾನವನ್ನು ತೀರಾ ಹತ್ತಿರನಿಂದ ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. 

SCROLL FOR NEXT