ರಾಜ್ಯ

ಹುಬ್ಬಳ್ಳಿಗೆ ಆರೋಗ್ಯ ಯೋಜನೆಯಡಿ ಸ್ಮಾರ್ಟ್ ಸಿಟಿ ಮೆರಿಟ್ ಪ್ರಮಾಣಪತ್ರ

Nagaraja AB

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ- ಸಬಲೀಕರಣ ಭಾರತ ಪ್ರಶಸ್ತಿಯಡಿಯಲ್ಲಿ ಮೆರಿಟ್ ಪ್ರಮಾಣಪತ್ರಕ್ಕೆ ಜಿಲ್ಲೆಯ ಚಿತಗುಪ್ಪಿ ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದ ಸ್ಮಾರ್ಟ್ ಸಿಟಿ ಯೋಜನೆ ಆಯ್ಕೆಯಾಗಿದೆ

ಹುಬ್ಬಳ್ಳಿಯ ಯೋಜನೆಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ‘ಅತ್ಯುತ್ತಮ ಸ್ಮಾರ್ಟ್ ಆರೋಗ್ಯ ಯೋಜನೆ’ ವರ್ಗದಲ್ಲಿ  ಆಯ್ಕೆ ಮಾಡಿದೆ. ಸ್ಮಾರ್ಟ್ ಸಿಟಿ ಸಬಲೀಕರಣ ಭಾರತ ಪ್ರಶಸ್ತಿಯ -2019ರ ಸಂಯೋಜಕ ಬಿ.ಶೇಖರ್ ಈ ವಿಷಯ ಪ್ರಕಟಿಸಿದ್ದಾರೆ. 
 
ಚಿತಗುಪ್ಪಿ ಆಸ್ಪತ್ರೆ ವಿದ್ಯುನ್ಮಾನ ಆರೋಗ್ಯ ದಾಖಲೆಗಳು (ಇಎಂಆರ್ ), ವಾಸ್ತವಾಂಶದ ಆರೋಗ್ಯ ಸೇವೆ, ಸ್ಮಾರ್ಟ್ ತಪಾಸಣೆಗಲು, ಸ್ಮಾರ್ಟ್ ಆಸ್ಪತ್ರೆಯ ನಿರ್ವಹಣಾ ವ್ಯವಸ್ಥೆ ಸಾಫ್ಟ್ ವೇರ್, ಔಷಧ ನಿರ್ವಹಣಾ ವ್ಯವಸ್ಥೆ ಮತ್ತಿತರರ ವ್ಯವಸ್ಥೆಗಳನ್ನು ಹಮ್ಮಿಕೊಂಡಿದೆ.ಈ ಯೋಜನೆಯನ್ನು ಆಸ್ಪತ್ರೆಯಲ್ಲಿ ಒಟ್ಟಾರೆ 3.05 ಕೋಟಿ ರೂ. ವ್ಯಯಿಸಲಾಗಿದೆ. 
 
ಸ್ಮಾರ್ಟ್ ಆರೋಗ್ಯ ಯೋಜನೆಯ ಮುಖ್ಯಾಂಶಗಳೆಂದರೆ, ರೋಗಿಗಳ ದಾಖಲೆಗಳಿಗೆ ಅತಿ ಶೀಘ್ರದ ಸಂಪರ್ಕ, ಟೆಲಿ-ಮೆಡಿಸಿನ್ ಕಿಟ್ ನಲ್ಲಿ ರೋಗಿಗಳ ಮಾಹಿತಿ ಮುದ್ರಣ, ವಿಡಿಯೋ ಕಾನ್ಫರೆನ್ಸ್ ಮೂಲಕ ರೋಗಿಗಳು ಹಾಗೂ ವೈದ್ಯರ ಸಂಪರ್ಕ ಮತ್ತಿತರರ ಅಂಶಗಳಾಗಿವೆ.ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಈ ವರ್ಗದಲ್ಲಿ ಎರಡನೇ ಪ್ರಶಸ್ತಿ ದೊರೆತಿದೆ.

SCROLL FOR NEXT