ರಾಜ್ಯ

ಕಾನೂನು ಬಾಹಿರ ಪ್ರತಿಭಟನೆ: ಪಿಎಫ್ ಐ, ಎಸ್ ಡಿಪಿಐ, ಸಿಎಫ್ಐ ಕಾರ್ಯಕರ್ತರ ವಿರುದ್ದ ಕೇಸ್ ದಾಖಲು

Lingaraj Badiger

ಬಂಟ್ವಾಳ: ಪೂರ್ವಾನುಮತಿಯಿಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಮೇಲೆ  ಬಂಟ್ವಾಳ  ಟೌನ್  ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್  ಇಂಡಿಯಾ(ಎಸ್ ಡಿ ಪಿ ಐ)  ಹಾಗೂ ಕ್ಯಾಂಪಸ್  ಫ್ರಂಟ್ ಆಫ್ ಇಂಡಿಯಾ( ಸಿಎಫ್ ಐ) ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ರಾತ್ರಿ  ಏಳು ಗಂಟೆ ಸಮಯದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೈಕಂಬ ಬಳಿ ಪಿಎಫ್ ಐ,  ಸಿಎಫ್ ಐ ಹಾಗೂ ಎಸ್ ಡಿಪಿಐ ಸಂಘಟನೆಗಳ ಸದಸ್ಯರು ಪ್ರತಿಭಟನೆ  ನಡೆಸಿದ್ದು, ಒಂದೆಡೆ ಗುಂಪುಗೂಡಿದ್ದ ಜನರನ್ನು ಚದುರಿಸಿ, ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾಗಿ ಪೊಲೀಸರು ಹೇಳಿದ್ದಾರೆ.

ಈ ಮೂರು ಸಂಘಟನೆಗಳ ನಾಯಕರು ಸೇರಿದಂತೆ ಸುಮಾರು ಮೂವತ್ತು ಮುಂದಿ ಪೂರ್ವಾನುಮತಿಪಡೆಯದೆ ದ್ವನಿವರ್ಧಕ ಬಳಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  ಈ ಸಂಬಂಧ ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT