ರಾಜ್ಯ

ಬೆಂಗಳೂರು: ಮಾಜಿ ಸೈನಿಕನ ಅಪಹರಿಸಿ ದರೋಡೆ

Raghavendra Adiga

ಬೆಂಗಳೂರು: ಕ್ರಿಸ್‌ಮಸ್ ದಿನದಂದು 58 ವರ್ಷದ ಸೇನೆಯಲ್ಲಿದ್ದು ನಿವೃತ್ತರಾಗಿದ್ದ ವ್ಯಕ್ತಿಯನ್ನು ಮೆಜೆಸ್ಟಿಕ್ ಬಳಿ ದರೋಡೆಕೋರರ ತಂಡವೊಂದು ಅಪಹರಿಸಿ ದರೋಡೆ ನಡೆಸಿರುವ ಕೃತ್ಯ ಬೆಳಕಿಗೆ ಬಂದಿದೆ.

ಕೊಡಗು ಜಿಲ್ಲೆಯ ವಿರಾಜ್‌ಪೇಟೆ ತಾಲ್ಲೂಕಿನ ಬೆಲ್ಲುಮಡು ಗ್ರಾಮದ ನಿವಾಸಿ ಮಾಚಯ್ಯ ಪಿಎಂ ಅವರು ಕಮಾಂಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಡಿಸೆಂಬರ್ 25 ರಂದು ಬೆಂಗಳೂರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ಮಾಚಯ್ಯನವರ ದೂರಿನನ್ವಯ ಅವರು ಕಾಟನ್‌ಪೇಟ್ ಮುಖ್ಯ ರಸ್ತೆಯ ಕೆಂಗೇರಿ ಗೇಟ್‌ವೇ ಲಾಡ್ಜ್‌ನಲ್ಲಿ ತಂಗಿದ್ದರು. ಸಂಜೆ 7.30 ರ ಸುಮಾರಿಗೆ ಅವರು ತಮ್ಮ ಮಿಲಿಟರಿ ಗುರುತಿನ ಚೀಟಿಯ ಫೋಟೊಕಾಪಿ ಪಡೆಯಲು ಮತ್ತುಊಟಕ್ಕಾಗಿ ಹೊರಟರು. ಆ ವೇಳೆ ಮೂವರು ಸದಸ್ಯರಿದ್ದ ಗ್ಯಾಂಗ್ ಅವನನ್ನು ಆಟೋರಿಕ್ಷಾದಲ್ಲಿ ಹಿಂಬಾಲಿಸಿಅಡ್ಡಗಟ್ಟಿ ಮುಖವನ್ನು ಬಟ್ಟೆಯಿಂದ ಮುಚ್ಚಿ ಕೂಗಿಕೊಳ್ಲದಂತೆ ಎಚ್ಚರಿಸಿದ್ದು ಚಾಕು ತೀಓರಿಸಿ ಬೆದರಿಸಿ ಅಪಹರಿಸಿದ್ದಾರೆ ಇದರಿಂದ ಹೆದರಿದ ಮಾಚಯ್ಯ ಅವರೊಡನೆ ಕುಳಿತು ಪ್ರಯಾಣಿಸಿದ್ದಾರೆ. ಆಗ ಅವರುಗಳು ಆತನನ್ನು ನಿಂದಿಸಿದರು ಮತ್ತು ಹಲ್ಲೆ ಮಾಡಿದರು, ಮತ್ತು ದುಷ್ಕರ್ಮಿಗಳು ಅವನನ್ನು ಎಲ್ಲಿಗೆ ಕರೆದೊಯ್ಯುತ್ತಿದ್ದಾರೆಂದು ಸಹ ಅವರಿಗೆ ಅರಿವಿರಲಿಲ್ಲ. ಹೊಟ್ಟೆಯ ಎರಡೂ ಬದಿಗಳಲ್ಲಿ ಚಾಕುಗಳನ್ನು ಹಿಡಿದಿದ್ದ ಇಬ್ಬರು ಪುರುಷರ ನಡುವೆ ಕುಳಿತುಕೊಳ್ಳುವಂತೆ  ಆತನಿಗೆ ಒತ್ತಾಯಿಸಲಾಗಿದೆ.  ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅವರಿಗೆ ಬೆದರಿಕೆ ಹಾಕಲಾಗಿದೆ. ಸುಮಾರು ಒಂದು ಗಂಟೆಯ ನಂತರ, ನಿರ್ಜನ ಸ್ಥಳದಲ್ಲಿ ಆಟೋ ನಿಲ್ಲಿಸಿದ್ದಾರೆ.

ಮುಖದ ಬಟ್ಟೆ ತೆಗೆದು ಅವರಿಗೆ ಹೊಡೆದಿದ್ದಾರೆ. ಅಲ್ಲದೆ ಅವರ ಬಳಿಯಿದ್ದ 12,000 ರೂ ನಗದು, ಮೂರು ಚಿನ್ನದ ಉಂಗುರಗಳು, ಒಂದು ಬೆಳ್ಳಿ ಉಂಗುರ, ಕೈಚೀಲ ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ. ತಮಗೆ ಹೆಚ್ಚಿನ ಹಣ ಕೊಡಬೇಕೆಂದು ಒತ್ತಾಯಿಸಿದ ಮೂವರು ಆತನ ಹೊಟ್ಟೆ ಗೆ ಚಾಕುವಿನಿಂದ ಇರಿದಿದ್ದಾರೆ. ಆದರೆ ಮಾಚಯ್ಯ ಆ ಗ್ಯಾಂಗ್ ನಿಂದ ಹೇಗೋ ತಪ್ಪಿಸಿಕೊಂಡು  ದೂರದಲ್ಲಿ ನಿಯೋಜಿಸಲಾಗಿದ್ದ ಸೆಕ್ಯೂರಿಟಿ ಗಾರ್ಡ್ ನ ತಲುಪಿದ್ದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.

ಸೆಕ್ಯುರಿಟಿ ಗಾರ್ಡ್ ಮಾಚಯ್ಯ ಮೆಜೆಸ್ಟಿಕ್‌ನಿಂದ 14 ಕಿ.ಮೀ ದೂರದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿ ಇದ್ದುದಾಗಿ ಹೇಳಿದ್ದ. ಅಲ್ಲದೆ ಮಾಚಯ್ಯನವರು ಆಸ್ಪತ್ರೆ ತಲುಪಲು ಸಹಾಯ ಂಆಡಿದ್ದ.  ಅವರ ಗಾಯಗಳಿಗೆ ಚಿಕಿತ್ಸೆ ಪಡೆದ ನಂತರ, ಲಾಡ್ಜ್ ಗೆ ಮರಳಿದ ಮಾಚಯ್ಯ ತ್ತು ಕಾಟನ್‌ಪೇಟ್ ಪೊಲೀಸರಿಗೆ ದೂರು ನೀಡಿದರು.

ಮೂವರು ಸ್ಥಳೀಯ ಭಾಷೆಯಲ್ಲಿ ಮಾಚಯ್ಯನವರೊಡನೆ ಮಾತನಾಡಿದ್ದಾರೆ. ಮುಖ ಮುಚ್ಚಿದ್ದರಿಂದ ಆಟೋದ ನೋಂದಣಿ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. ಆತನ ದೂರಿನ ಆಧಾರದ ಮೇಲೆ, ಅಪಹರಣ, ದರೋಡೆ, ದೌರ್ಜನ್ಯದ ಪ್ರಕರಣವನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಅಪರಾಧಿಗಳ ಪತ್ತೆಗೆ ತಂಡ ರಚನೆಯಾಗಿದ್ದು ಮಾಚಯ್ಯ ಯಾರೊಡನಾದರೂ ಹಣದ ವಿವಾದ ಹೊಂದಿದ್ದರೆ ಎನ್ನುವುದುಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ

SCROLL FOR NEXT