ಹೊಸಪೇಟೆ: ಉದ್ಘಾಟನೆ ಮುನ್ನವೇ ನೆಲಸಮವಾದ ಕೋಳಿ ಸಾಕಣೆ ಕೇಂದ್ರ 
ರಾಜ್ಯ

ಹೊಸಪೇಟೆ: ಉದ್ಘಾಟನೆ ಮುನ್ನವೇ ನೆಲಸಮವಾದ ಕೋಳಿ ಸಾಕಣೆ ಕೇಂದ್ರ

ಅಧಿಕಾರಿಗಳ ಬೇಜಾವಾಬ್ದಾರಿಯ ಕಾರಣ ಉದ್ಘಾಟನೆಗೆ ಮುನ್ನವೇ ಕೋಳಿ ಸಾಕಣೆ ಕೇಂದ್ರವೊಂದು ನೆಲಸಮವಾಗಿ ಸರ್ಕಾರದ ಬೊಕ್ಕೆಸಕ್ಕೆ ಲಕ್ಷ ಲಕ್ಷ ರು. ನಷ್ಟವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ. 

ಹೊಸಪೇಟೆ: ಅಧಿಕಾರಿಗಳ ಬೇಜಾವಾಬ್ದಾರಿಯ ಕಾರಣ ಉದ್ಘಾಟನೆಗೆ ಮುನ್ನವೇ ಕೋಳಿ ಸಾಕಣೆ ಕೇಂದ್ರವೊಂದು ನೆಲಸಮವಾಗಿ ಸರ್ಕಾರದ ಬೊಕ್ಕೆಸಕ್ಕೆ ಲಕ್ಷ ಲಕ್ಷ ರು. ನಷ್ಟವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದಿದೆ.

2014 ಮತ್ತು 2015ರ ಸಾಲಿನಲ್ಲಿ ನಿರ್ಮಾಣಗೊಂಡಿದ್ದ ತಾಯಿ ಕೋಳಿ ಸಾಕಾಣಿಕ ಕೇಂದ್ರದ ಕಟ್ಟಡ ಇದೀಗ ಜೆಸಿಬಿ ನಿಂದ ನೆಲಸಮ ಮಾಡಲ್ಪಟ್ಟಿದ್ದು ಇದೇ ಸ್ಥಳದಲ್ಲಿ ಹೊಸ ಯೋಜನೆಗೆ ಗುದ್ದಲಿ ಪೂಜೆ ನೆರವೇರಿದೆ.

ಅಧಿಕಾರಿಗಳ ಅವೈಜ್ಞಾನಿಕ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಗಟ್ಟಲೆ ಹಣ ನಷ್ಟವಾಗಿದ್ದು ಉದ್ದೇಶಿತ ಕಟ್ಟಡದಲ್ಲಿ ಒಂದು ಕೋಳಿಯೂ ಸಾಕಾಣಿಕೆಮಾಡದೆ ಕಟ್ಟಡ ನೆಲಸಮ ಮಾಡಲಾಗಿದೆ.ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುರಿ ಉಣ್ಣೆ ಸಂಸ್ಕರಣ ಘಟಕ ಸ್ಥಾಪನೆಗೆ ಸ್ಥಳಾವಕಾಶ ಕೊರತೆ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನೆಲಸಮಗೊಳಿಸಲಾಗಿದೆ.

ಇನ್ನು ಈ ಕುರಿ ಉಣ್ಣೆ ಸಂಸ್ಕರಣಾ ಘಟಕ ಕೇವಲ ಹೊಸಪೇಟೆಯಲ್ಲಿ ಂಆತ್ರವಲ್ಲದೆ ಬೀದರ್,ಕಲಬುರಗಿ,ರಾಯಚೂರು,ಬಳ್ಳಾರಿ,ಕೊಪ್ಪಳ, ಯಾದಗಿರಿ, ಈ ಎಲ್ಲಾ ಜಿಲ್ಲೆಗಳಿಗೆ ಇರುವ ಏಕೈಕ ಘಟಕವಾಗಿದೆ.

ಇದಕ್ಕೆ ಮುನ್ನ ನಿರ್ಮಾಣಗೊಂಡಿದ್ದ ಕೋಳಿ ಸಾಕಣೆ ಕೇಂದ್ರಕ್ಕೆ ಅಂದಾಜು 15ಲಕ್ಷ ಮೊತ್ತ ಖರ್ಚಾಗಿತ್ತು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾಕಾರನ ತಂದೆ ಮೇಲೆ ಹಲ್ಲೆ ಆರೋಪ; ದೆಹಲಿಯಲ್ಲಿ ಭಾರೀ ಹೈಡ್ರಾಮಾ; ಹಿಂದುತ್ವ ಕಾರ್ಯಕರ್ತನ ಬಂಧನಕ್ಕೆ ಆಗ್ರಹ, ಪೊಲೀಸ್ ಠಾಣೆಗೆ CJP ಮುತ್ತಿಗೆ

ಮಳೆ ಕೊರತೆ, ಬರದ ಆತಂಕ; ರಾಜ್ಯದಲ್ಲಿ 28.52 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆಗೆ ಸರ್ಕಾರ ಚಾಲನೆ

ನನ್ನ ನಿರಾಯುಧ ಪತಿ ಕೊಂದ ನೀನು ಗಲ್ಲು ಶಿಕ್ಷೆಗೆ ಯೋಗ್ಯ: ವಿಧವೆಯರ ಬಗ್ಗೆ ನಿನಗೇನು ಗೊತ್ತು? ಸಂತ್ರಸ್ತನ ಸೋಗು ಹಾಕಬೇಡ; ನಿರ್ಮಲಾ ಖನ್ನಾ ಆಕ್ರೋಶ

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!