300 ಟನ್ ತೂಕದ ಬೃಹತ್ ಏಕಶಿಲಾ ವಿಷ್ಣು ವಿಗ್ರಹ 
ರಾಜ್ಯ

240 ಟೈರ್ ನ ಟ್ರೇಲರ್ ನಲ್ಲಿ ಬೆಂಗಳೂರಿಗೆ ಬರುತ್ತಿದೆ 300 ಟನ್ ತೂಕದ ಬೃಹತ್ ವಿಷ್ಣು ವಿಗ್ರಹ!

ತಮಿಳುನಾಡಿನ ತಿರುವಣ್ಣಮಲೈ ಜಿಲ್ಲೆಯ ಗ್ರಾಮವೊಂದರಿಂದ ಏಕಶಿಲಾ ವಿಶ್ವರೂಪ ಮಹಾವಿಷ್ಣು ಪ್ರತಿಮೆಯನ್ನು ಬೆಂಗಳೂರಿಗೆ ತರಲಾಗುತ್ತಿದೆ....

ಬೆಂಗಳೂರು: ತಮಿಳುನಾಡಿನ ತಿರುವಣ್ಣಮಲೈ ಜಿಲ್ಲೆಯ ಗ್ರಾಮವೊಂದರಿಂದ ಏಕಶಿಲಾ ವಿಶ್ವರೂಪ ಮಹಾವಿಷ್ಣು ಪ್ರತಿಮೆಯನ್ನು ಬೆಂಗಳೂರಿಗೆ ತರಲಾಗುತ್ತಿದೆ.
64 ಅಡಿ ಎತ್ತರದ  300 ಟನ್  ತೂಕದ ಗ್ರಾನೈಟ್ ಮೂರ್ತಿಯನ್ನು ಸದ್ಯ 240 ಟೈರಿನ ಟ್ರೈಲರ್‌ನಲ್ಲಿ ಸಾಗಿಸಲಾಗುತ್ತಿದೆ. ಈ ಬೃಹತ್ ವಿಗ್ರಹವನ್ನು ಬೆಂಗಳೂರಿನ  ಈಜಿಪುರದಲ್ಲಿರುವ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಾಪಿಸಲಾಗುವುದು. 
ಸದ್ಯ ವಿಗ್ರಹ ಹೊತ್ತ ಟ್ರೈಲರ್ ಕೃಷ್ಣಗಿರಿ ತಲುಪಿದೆ, ಪ್ರತಿದಿನ ಕೇವಲ 2 ಕಿಮೀ ದೂರ ಮಾತ್ರ ಕ್ರಮಿಸುತ್ತಿದೆ. ಫೆಬ್ರವರಿ ಕೊನೆ ವಾರದಲ್ಲಿ ವಿಗ್ರಹವಿರುವ ಟ್ರೈಲರ್ ಹೊಸೂರಿಗೆ ತಲುಪುವ ಸಾಧ್ಯತೆಯಿದೆ, ದಾರಿಯಲ್ಲಿರುವ ಎಲ್ಲಾ ಟೋಲ್ ಬೂತ್ ಗಳು ಟ್ರೈಲರ್ ಗೆ ದಾರಿ ಮಾಡಿಕೊಡುತ್ತಿವೆ, ಮಾರ್ಚ್ ತಿಂಗಳ ಕೊನೆ ಮತ್ತು ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಿಗ್ರಹ ಬೆಂಗಳೂರು ತಲುಪಲಿದೆ, ರಾಮನವಮಿಯೊಳಗೆ ವಿಗ್ರಹ ಸ್ಥಾಪನೆ ಮಾಡುವ ಸಾಧ್ಯತೆಯಿದೆ. 
ಲೋಕಸಭೆ ಚುನಾವಣೆ ವೇಳೆ ವಿಗ್ರಹ ಬೆಂಗಳೂರಿಗೆ ಬಂದರೇ ನಾವು ಮೂರ್ತಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷ 300 ಚಕ್ರದ ವಾಹನದಲ್ಲಿ  ಹನುಮಂತನ ಏಕಶಿಲಾ ವಿಗ್ರಹವನ್ನು ಕೋಲಾರದಿಂದ ತರಲಾಗಿತ್ತು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ  ಸುಮಾರು 30 ಗಂಟೆಗಳ ಕಾಲ ಮೂರ್ತಿಯಿದ್ದ ವಾಹನವನ್ನು ತಡೆಹಿಡಿಯಲಾಗಿತ್ತು ಎಂದು ಕೇಂದ್ರೀಯ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ: ಷರತ್ತಿನ ಅರಿವಿದೆ, ಮುಂದಾಲೋಚನೆಯಿಂದ ಟೆಂಡರ್ ಆಹ್ವಾನ

ಒಮನ್ ಭೇಟಿ ವೇಳೆ ಮೋದಿ ಹೊಸ ಸ್ಟೈಲ್ ಬಗ್ಗೆ ಭಾರಿ ಚರ್ಚೆ: ಪ್ರಧಾನಿ ಕಿವಿಗೆ ಧರಿಸಿದ್ದೇನು?

ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ, 5 ವರ್ಷ ನಾನೇ ಸಿಎಂ: ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಪುನರುಚ್ಛಾರ

ಬೆಂಗಳೂರು: ಮನೆ ಬಳಿ ಆಟವಾಡ್ತಿದ್ದ ಬಾಲಕನಿಗೆ 'ಕಾಲಿನಿಂದ ಒದ್ದು' ವಿಕೃತಿ! ಪಕ್ಕದ ಮನೆಯ ಆರೋಪಿ ಬಂಧನ, ಬಿಡುಗಡೆ

ಸಂಸತ್ ಅಧಿವೇಶನಕ್ಕೆ ತೆರೆ: ಲೋಕಸಭೆ, ರಾಜ್ಯಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

SCROLL FOR NEXT