ಉಡುಪಿ: ಭೂಗತ ಪಾತಕಿ ರವಿ ಪೂಜಾರಿ ಉಡುಪಿ ಜಿಲ್ಲೆಯ ನೇರ್ಗಿ ಗ್ರಾಮದವನು, ಆತನ ಅಪರಾಧ ಜೀವನ ಆರಂಭವಾಗಿದ್ದು ಮಂಬಯಿಯಿಂದ.
1990ರಲ್ಲಿ ಉಡುಪಿಯ ಪಣಿಯೂರಿನ ಸಾಧು ಶೆಟ್ಟಿ ರವಿ ಪೂಜಾರಿಯನ್ನು ಗ್ಯಾಂಗ್ ಸ್ಟರ್ ಚೋಟಾ ರಾಜನ್ ಗೆ ಪರಿಚಯಿಸಲಾಗಿತ್ತು, ಮಂಗಳೂರು ಮತ್ತು ಉಡುಪಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಾಗೂ ಶ್ರೀಮಂತರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದನು.
2005 ರಿಂದ ಕರಾವಳಿ ಜಿಲ್ಲೆಗಳಲ್ಲಿ ಪೂಜಾರಿ ನಂಬಿಕಸ್ಥ ಸಹಚರರಿ ದೂರಾಗಿದ್ದರಿಂದ, ಆತನ ಭೂಗತ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿತ್ತು. ನಂತರ ಆತ ಬಿಹಾರದಿಂದ ಸಹಚರರನ್ನು ಕರೆಸಿಕೊಂಡ, ಆದರೆ ಅವರನ್ನಿಟ್ಟುಕೊಂಡು ತನ್ನ ಬಿಸಿನೆಸ್ ಮುಂದುವರಿಸಲು ಸಾಧ್ಯವಾಗಲಿಲ್ಲ,
2017ರ ಡಿಸೆಂಬರ್ ತಿಂಗಳಲ್ಲಿ ಪೂಜಾರಿ ಸಹಚರರೆಂದು ಹೇಳಿಕೊಂಡ ಇಬ್ಬರು ಮಂಗಳೂರಿನ ಕಾರ್ ಸ್ಚ್ರೀಟ್ ನಲ್ಲಿ ಎಂ. ಸಂಜೀವ್ ಶೆಟ್ಟಿ ಎಂಬುವರ ಮೇಲೆ ಪೈರಿಂಗ್ ನಡೆದಿತ್ತು,
ರವಿ ಪೂಜಾರಿ ಜೊತೆ ಹೇಮಂತ್ ಪೂಜಾರಿ ಹೆಸರು ಸೇರಿಕೊಂಡಿತ್ತು, ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ,
ಉದ್ಯಮಿಗಳಿಗೆ, ಶ್ರೀಮಂತ ವ್ಯಕ್ತಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದನು, 2 ಕೋಟಿ ಹಣ ನೀಡುವಂತೆ ಒತ್ತಡ ಹಾಕುತ್ತಿದ್ದನು, ಆರಂಭದಲ್ಲಿ ಕೇವಲ ಶ್ರೀಮಂತರಿಗೆ ಕರೆ ಮಾಡುತ್ತಿದ್ದ ರವಿ ಪೂಜಾರಿ, ಬೇರೆಯವರು ಮಾಡಿದ ಅಪರಾಧಗಳಿಗೆ ಕ್ರೆಡಿಟ್ ತೆಗೆದುಕೊಳ್ಳಲು ಪ್ರಾರಂಭಿಸಿದ ಎಂದು ಮಂಗಳೂರಿನ ಪಶ್ಚಿಮ ವಿಭಾಗದ ನಿವೃತ್ತ ಐಜಿಪಿ ಪಿ. ಹರಿಶ್ಚಂದ್ರ ಹೇಳಿದ್ದಾರೆ.
ರವಿ ಪೂಜಾರಿ ಅವನತಿ ಹಾದಿ ಹಿಡಿಯಲು ಹಲವು ಕಾರಣಗಳಿವೆ, ಆತನ ಸಹಚರರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡರು, ಮಂಗಳೂರಿನಲ್ಲಿ ಆತನ ಬಲಗೈ ಬಂಟನಾಗಿದ್ದ ಕಾಳಿ ಯೋಗೇಶ್ ಪೂಜಾರಿಯಿಂದ ಪ್ರತ್ಯೇಕವಾದದ್ದು, ಆತನಿಗೆ ದೊಡ್ಡ ಹಿನ್ನಡೆಯಾಯಿತು.
ಮುಂಬಯಿ ಪೊಲೀಸರು ಆತನ ಮತ್ತೊಬ್ಬ ಸಹಚರ ಆಕಾಶ್ ಶೆಟ್ಟಿಯನ್ನು ಬಂಧಿಸಿದರು. ಮತ್ತೊಬ್ಬ ಬಂಟ ವಿಲಿಯಮ್ ರೋಡ್ರಿಗಸ್ ಕೂಡ ಪೊಲೀಸರ ವಶಕ್ಕೆ ಸೇರಿದ. ಈಗ ಅಂತಿಮವಾಗಿ ಪಾತಕಿ ರವಿ ಪೂಜಾರಿ ಕೂಡ ಪೊಲೀಸರ ಅತಿಥಿಯಾಗಿದ್ದಾನೆ.