ಈಗ ತಿಂದು ತಿಂಗಳಾದ ಮೇಲೆ ಹಣ ನೀಡಿ, ಇದು ಕೊಪ್ಪಳದ ಮಾಲಮ್ಮನ ಕ್ಯಾಂಟೀನ್ ಸ್ಟೋರಿ!
ಕೊಪ್ಪಳ: ಸಾಮಾನ್ಯವಾಗಿ ಹೋಟೆಲ್ ಉದ್ಯಮವೆನ್ನುವುದು ಹೆಚ್ಚು ಲಾಭ ತರಬಹುದಾದ ಉದ್ಯಮವೆನಿಸಿದೆ. ಇಲ್ಲಿಗೆ ಬರುವವರಾರೂ ಕಿರಾಣಿ ಅಂಗಡಿಗಳಂತೆ ತಿಂಗಳ ಲೆಕ್ಕದಲ್ಲಿ ಬಾಕಿ ಇರಿಸುವುದಿಲ್ಲ ಎನ್ನುವುದು ತಿಳಿದ ಸಂಗತಿ. ಆದರೆ ಕೊಪ್ಪಳದ ಈ ಕ್ಯಾಂಟೀನ್ ಮಾತ್ರ ಕಾಲೇಜು ವಿದ್ಯಾರ್ಥಿಗಳಿಗೆ ಮಾಸಿಕ ಪಾವತಿಗೆ ಅವಕಾಶ ಕಲ್ಪಿಸುವ ಮೂಲಕ ಗಮನ ಸೆಳೆದಿದೆ. ಈ ಕ್ಯಾಂತೀನ್ ನಲ್ಲಿ ಕಳೆದ 30 ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗುತ್ತಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿನ ಸರ್ಕಾರಿ ಜೂನಿಯರ್ ಕಂಪೋಸಿಟ್ ಕಾಲೇಜಿನ ಹೊರಗೆ ಈ ಕ್ಯಾಂಟೀನ್ ಇದ್ದು ಮಹಾರಾಷ್ಟ್ರ ಮೂಲದ ಮಾಲಮ್ಮ ಈ ಕ್ಯಾಂಟೀನ್ ನಡೆಸುತ್ತಿದ್ದಾರೆ. ಉಪಹಾರದ ವೇಳೆ ಇಡ್ಲಿ' (ಸಾಂಬಾರ್ ಮತ್ತುಚಟ್ನಿ), ಉಪ್ಪಿಟ್ಟು, ಲಭ್ಯವಿರಲಿದ್ದು ಇವಕ್ಕೆ ಕೇಲವ 5 ರೂ ದರ ನಿಗದಿಪಡಿಸಲಾಗಿದೆ.ಮಿರ್ಚಿ ಬಜ್ಜಿ ಹಾಗೂ ಉಪ್ಪಿಟ್ಟಿಗೆ 'ಕೇವಲ ರೂ 3 ಹಾಗೆಯೇ ಪಲಾವ್ ಗೆ 10 ರೂ. ನಲ್ಲಿ ನೀಡಲಾಗುತ್ತಿದೆ.
ತಿನಿಸುಗಳ ಗುಣಮಟ್ಟ ಸಹ ಉತ್ತಮವಾಗಿದ್ದು ಇದೇ ಕಾರಣದಿಂದ ಕಳೆದ 30 ವರ್ಷಗಳಿಂದ ಕ್ಯಾಂಟೀನ್ ಅನ್ನು ನಡೆಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ, ಪ್ರತಿ ಶನಿವಾರ ದೈಹಿಕ ಶಿಕ್ಷಣದ ಬಳಿಕ ವಿಶೇಷವಾಗಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ಕ್ಯಾಂಟೀನ್ ಗೆ ಆಗಮಿಸಿ ಉಪಹಾರ ಸ್ವೀಕರಿಸುತ್ತಾರೆ. ಮಾಲಮ್ಮನವರ ಉದಾರತೆಯ ಕಾರಣ ಅವರು ತಿಂಗಳಿಗೊಮ್ಮೆ ಉಪಹಾರಕ್ಕಾಗಿನ ಹಣ ಪಾವತಿಸುತ್ತಾರೆ."ಕೆಲ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ದೊರಕಿದ್ದು ಅವರು ಸಹ ನನ್ನನ್ನು ನೆನೆಯುತ್ತಾರೆ" ಎಂದು ಮಾಲಮ್ಮ ಹೇಳಿದರು. ಹಾಗೆ ವೃತ್ತಿ ಪಡೆದ ಬಳಿಕ ವಿದ್ಯಾರ್ಥಿಗಳು ಂಆಲಮ್ಮನನ್ನು ಅವರ ಮನೆಗೆ ಆಹ್ವಾನಿಸಿ ಸತ್ಕರಿಸುತ್ತಾರೆ. ಇದು ಕೃತಜ್ಞತೆಯ ಸಂಕೇತವಾಗಿದೆ.
ಕಳೆದ 30 ವರ್ಷಗಳ ಕ್ಯಾಂಟೀನ್ ನಡೆಸುತ್ತಿರುವ ಮಾಲಮ್ಮನವರ ಇಬ್ಬರು ಪುತ್ರರು ಹಾಗೂ ಇಬ್ಬರು ಹೆಣ್ಣುಮಕ್ಕಳು ವಿವಾಹವಾಗಿದ್ದಾರೆ.ಅಲ್ಲದೆ ಅವರೊಂದು ಸಣ್ಣ ಮನೆಯನ್ನೂ ಕಟ್ಟಿಸಿದ್ದಾರೆ.
ಕಾಲೇಜು ಪ್ರಾಂಶುಪಾಲ ಜಗದೀಶ್ ಹಡಿಮಾನಿ ಸಹ ಮಾಲಮ್ಮನವರನ್ನು ಪ್ರಶಂಸಿಸುತ್ತಾರೆ.ಮಾಲಮ್ಮ ವಿದ್ಯಾರ್ಥಿಗಳಿಗೆ ಭೋಜನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.