ಬೆಂಗಳೂರು: ಶಿವಮೊಗ್ಗ -ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಭಾನುವಾರ ಆರಂಭವಾಗಲಿದ್ದು,ಸಂಜೆ 6 ಗಂಟೆಗೆ ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಜನಶತಾಬ್ದಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
14 ಬೋಗಿಯ ರೈಲಿನಲ್ಲಿ 7 ಎಸಿ ಬೋಗಿಗಳ ಜನ್ಮ ಶತಾಬ್ದಿ ರೈಲು ಸೋಮವಾರ, ಬುಧವಾರ, ಶುಕ್ರವಾರ ಶಿವಮೊಗ್ಗ-ಬೆಂಗಳೂರು ನಡುವೆ ಸಂಚಾರ ನಡೆಸಲಿದೆ. ಶನಿವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ರೈಲು ಭಾನುವಾರ ಸಂಜೆ ಬೆಂಗಳೂರಿನಿಂದ ಹೊರಡಲಿದೆ.
ಪ್ರತಿದಿನ ಬೆಳಿಗ್ಗೆ 5.15ಕ್ಕೆ ಹೊರಟು ಯಶವಂತಪುರಕ್ಕೆ ಬೆಳಗ್ಗೆ 10.10ಕ್ಕೆ ತಲುಪಲಿದೆ. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಭದ್ರಾವತಿ, ಕಡೂರು ಮತ್ತು ತುಮಕೂರಲ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.