ಬೆಂಗಳೂರಿನಲ್ಲಿ ಕುಖ್ಯಾತ ವಾಹನಗಳ್ಳನ ಬಂಧನ: 1 ಕಾರು, 6 ದ್ವಿಚಕ್ರ ವಾಹನ ವಶ
ಸಿಸಿಬಿ ಪೊಲೀಸರು 55 ವರ್ಷ ವಯಸ್ಸಿನ ಕುಖ್ಯಾತ ವಾಹನಗಳ್ಳನನ್ನು ಬಂಧಿಸಿ, ಆತನಿಂದ ಕಳವು ಮಾಡಲಾಗಿದ್ದ 15 ಲಕ್ಷ ರೂ. ಮೊತ್ತದ ಒಂದು ಕಾರು ಹಾಗೂ ಆರು...
ಬೆಂಗಳೂರು: ಸಿಸಿಬಿ ಪೊಲೀಸರು 55 ವರ್ಷ ವಯಸ್ಸಿನ ಕುಖ್ಯಾತ ವಾಹನಗಳ್ಳನನ್ನು ಬಂಧಿಸಿ, ಆತನಿಂದ ಕಳವು ಮಾಡಲಾಗಿದ್ದ 15 ಲಕ್ಷ ರೂ. ಮೊತ್ತದ ಒಂದು ಕಾರು ಹಾಗೂ ಆರು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಕಾರುಗಳ್ಳನನ್ನು ಪಿಲಕಲ್ ನಾಜಿರ್ ಎಂದು ಗುರುತಿಸಲಾಗಿದೆ.
ಸರ್ವೀಸ್ ಸ್ಟೇಷನ್‍ಗಳು ಮತ್ತು ಶೋರೂಮ್‍ಗಳ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಗುರಿಯಾಗಿಸಿಕೊಂಡು ಈತ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ವಿವಿಧ ಭಾಗಗಗಳಲ್ಲಿ ನಡೆದಿದ್ದ ವಾಹನ ಕಳುವಿನ ಏಳು ಪ್ರಕರಣಗಳಲ್ಲಿ ಬಂಧಿತ ಭಾಗಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.