ರಾಜ್ಯ

ಸಕಲೇಶಪುರ: ಇಟ್ಟಿಗೆ ಗೂಡಿನಲ್ಲಿ ಒತ್ತೆಯಾಳಾಗಿದ್ದ 24 ಕಾರ್ಮಿಕರ ರಕ್ಷಣೆ

Shilpa D
ಹಾಸನ: ಸಕಲೇಶಪುರ ತಾಲೂಕಿನ ಮಲಗಳ್ಳಿ ಗ್ರಾಮದ ಇಟ್ಟಿಗೆ ಗೂಡಮನಲ್ಲಿ ಒತ್ತೆಯಾಳುಗಳಾಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕೃಷ್ಣಗಿರಿಯ ಸುಮಾರು 24 ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.
ಮಲಗಳ್ಳಿ ಗ್ರಾಮದ ಸಚಿನ್ ಮತ್ತು ಮಂಜು ಎಂಬುವರ ಒಡೆತನದ ಇಟ್ಟಿಗೆ ಗೂಡಿನಲ್ಲಿ 5 ಮಕ್ಕಳು ಸೇರಿದಂತೆ ಒಟ್ಟು 24 ಕಾರ್ಮಿಕರು ಒತ್ತೆಯಾಳುಗಳಾಗಿ ದುಡಿಯುತ್ತಿದ್ದಾರೆ ಎಂಬ ಮಾಹಿತಿಯನ್ನು ಹಾಸನ ತಹಶೀಲ್ದಾರ್ ರಕ್ಷಿತ್ ಅವರಿಗೆ ಎನ್ ಜಿ ಒ ನೀಡಿಡದ ಮಾಹಿತಿ ಮೇರೆಗೆ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಮಂಜು ಆಪ್ತರಾದ ರಾಜು ಮತ್ತು ಮುರುಳಿ ಎಂಬುವರು ಕಳೆದ ತಿಂಗಳ ಹಿಂದೆ ಕೃಷ್ಣಗಿರಿಯಿಂದ ಕಾರ್ಮಿಕರನ್ನು ಕರೆತಂದು ಉತ್ತಮ ಸಂಬಳ ನೀಡುವ ಭರವಸೆ ನೀಡಿದ್ದರು, ಆದರೆ ಅದಾದ ನಂತರ ಮಾಲೀಕ ಅವರಿಗೆ ಸಂಬಳ ನೀಡಲಿಲ್ಲ, ಕೃಷ್ಣಗಿರಿಯಿಂದ ಖಾಸಗಿ ವಾಹನದಲ್ಲಿ ಕರೆ ತಂದು ಪ್ರತಿ ಕುಟುಂಬಕ್ಕೆ 10ರಿಂದ 20 ಸಾವಿರ ಹಣ ನೀಡಿದ್ದರು, ಆದರೆ ಅದಾದ ನಂತರ ಮಾಲೀಕ ಒಂದು ಬಿಡಿಗಾಸು ಹಣವನ್ನು ನೀಡಿಲ್ಲ ಜೊತೆಗೆ ವಾಸಿಸಲು ಸರಿಯಾದ ವ್ಯವಸ್ಥೆ ಇಲ್ಲ ಎಂದು ಬಿಡುಗಡೆಯಾಿರುವ ಕಾರ್ಮಿಕ ಮುತ್ತರಾಜ್ ಹೇಳಿದ್ದಾರೆ.
ದಾಳಿಯ ನಂತರ ಇಟ್ಟಿಗೆ ಗೂಡಿನ ಮಾಲೀಕರು ಕಾರ್ಮಿಕರನ್ನು ವಾಪಸ್ ಕೃಷ್ಣಗಿರಿಗೆ ಕಳುಹಿಸಿದ್ದಾರೆ, ಆದಾದ ನಂತರ ತಾಲೂಕು ಅಧಿಕಾರಿಗಳು ಮತ್ತು ಪೊಲೀಸರು ಎನ್ ಜಿ ಸಹಾಯದಿಂದ ಆ ಕಾರ್ಮಿಕರನ್ನು ವಾಪಸ್ ಕೃಷ್ಣಗಿರಿಯಿಂದ ಕರೆತಂದಿದ್ದಾರೆ, ಕಾರ್ಮಿಕರಿಗೆ ವೇತನ ನೀಡಲಾಗುತ್ತಿತ್ತು ಹಾಗೂ ಅವರನ್ನು ಒತ್ತೆಯಾಳಾಗಿರಿಸಿಕೊಂಡಿರಲಿಲ್ಲ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
SCROLL FOR NEXT