ರಾಜ್ಯ

ಲೇಡಿ ಡಾನ್ ಯಶಸ್ವಿನಿ ಗೌಡ ಮೇಲೆ ಗೂಂಡಾ ಕಾಯಿದೆ ಜಾರಿಗೆ ಪೊಲೀಸರ ಚಿಂತನೆ!

Shilpa D
ಬೆಂಗಳೂರು: ರೌಡಿ ಶೀಟರ್ ಲೇಡಿ ಡಾನ್ ಯಶಸ್ವಿನಿ ಗೌಡ ವಿರುದ್ಧ ಗೂಂಡಾ ಕಾಯಿದೆ ದಾಖಲಿಸಿಲು ಬೆಂಗಳೂರು ನಗರ ಪೊಲೀಸರು ಚಿಂತನೆ ನಡೆಸಿದ್ದಾರೆ,
ಇತ್ತೀಚೆಗೆ ನಗರದ ಮಹಿಳೆಯೊಬ್ಬರ ಮೇಲೆ ಲೇಡಿ ಡಾನ್ ಯಶಸ್ವಿನಿ ಹಲ್ಲೆ ನಡೆಸಿದ್ದಳು, ಆಕೆಯ ವಿರುದ್ಧ ಉತ್ತರ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ. ಒಂದು ವೇಳೆ ಆಕೆಯ ವಿರುದ್ಧ ಗೂಂಡಾ ಕಾಯಿದೆ ಜಾರಿ ಮಾಡಿದರೇ ನಗರದಲ್ಲಿ ಗೂಂಡಾ ಕಾಯಿದೆಗೊಳಗಾದ ಮೊಟ್ಟ ಮೊದಲ ಮಹಿಳೆಯಾಗಲಿದ್ದಾಳೆ.
ಯಶಸ್ವಿನಿ ವಿರುದ್ದ 2 ಪ್ರಕರಣಗಳು ದಾಖಲಾಗಿವೆ, ಬೆಂಗಳೂರು ದಕ್ಷಿಣ ಅಥವಾ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ಗೂಂಡಾ ಕಾಯ್ದೆ ಜಾರಿಗೊಳಿಸುತ್ತಾರೋ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ,
ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಹಲ್ಲೆ ಹಾಗೂ ಬೆದರಿಕೆ ಪ್ರಕರಣಗಳಲ್ಲಿ ಯಶಸ್ವಿನಿ ಭಾಗಿಯಾಗಿದ್ದಾಲೆ, ಇತ್ತೀಚೆಗೆ ಗಂಗಮ್ಮನಗುಡಿಯಲ್ಲಿ 42 ವರ್ಷದ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಳು.
ಆಕೆಯ ವಿರುದ್ಧ ಯಶವಂತಪುರ ಉಪ ವಿಭಾಗದಲ್ಲಿ ಪ್ರಕರಣ ದಾಖಲಾದ ದಿನದಿಂದ ಆಕೆ ನಾಪತ್ತೆಯಾಗಿದ್ದಾಳೆ, ಆಕೆಯ ಸಹಚರ ಗೋವಿಂದ ರಾಜ್ ಠಾಣೆಗೆ ಬಂದು ಲಲಿತಾ ಎಂಬ ಮಹಿಳೆ ತಪ್ಪು ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾನೆ, 
ಇನ್ನೂ ಅರುಣ ಎಂಬ ಪ್ರತ್ಯಕ್ಷ ದರ್ಶಿ  ಘಟನೆ ಬಗ್ಗೆ ಪೊಲೀಸರಿಗೆ ಸಾಕ್ಷಿ ಹೇಳಿದ್ದಕ್ಕೆ ಪೊಲೀಸ್ ಠಾಣೆಯಲ್ಲಿಯೇ ಅವರನ್ನು ಗೋವಿಂದರಾಜ್ ಥಳಿಸಿದ್ದು, ಪ್ರಕರಣವನ್ನು  ತನಿಖೆಗಾಗಿ ಮಲ್ಲೇಶ್ವರಂ ಠಾಣೆಗೆ ವರ್ಗಾಯಿಸಿದ್ದಾರೆ.
ಮುನಿಯಮ್ಮ ಅಥವಾ ಯಶಸ್ವಿನಿ ಬಸವನಗುಡಿ ಠಾಣೆಯ ವ್ಯಾಪ್ತಿಯಲ್ಲಿ ಲೇಡಿ ಡಾನ್ ಆಗಿದ್ದಳು, ಶ್ರೀರಾಮ ಸೇನೆ ಮಹಿಳಾ ವಿಭಾಗದ ಅಧ್ಯಕ್ಷೆ ಆಗಿರುವ ಯಶಸ್ವಿನಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದಳು, ಜೊತೆಗೆ ಆಕೆಯ ವಿರುದ್ಧ ಬೆದರಿಕೆ ಹಾಗೂ ಸುಲಿಗೆ ಪ್ರಕರಣಗಳು ದಾಖಲಾಗಿವೆ, ಕೆಲವರು ಮಾತ್ರ ಆಕೆಯ ವಿರುದ್ಧ ಪ್ರಕರಣ ದಾಖಲಿಸಲು ಧೈರ್ಯ ತೋರಿದ್ದಾರೆ.
SCROLL FOR NEXT