ರಾಜ್ಯ

ಜಾಗತಿಕ ಶ್ರೇಯಾಂಕ: ಕುವೆಂಪು ವಿವಿಗೆ 45ನೇ ಸ್ಥಾನ!

Raghavendra Adiga
ಶಿವಮೊಗ್ಗ: ಗುಣಮಟ್ಟದ ಶೈಕ್ಷಣಿಕ ಸಂಶೋಧನೆ, ತರಬೇತಿ, ಸಾಮಾಜಿಕ ಪರಿಣಾಮ, ಅವಿಷ್ಕಾರಗಳು ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾದ ಅಂತರಾಷ್ಟ್ರೀಯ ರ್ಯಾಂಕಿಂಗ್ (ಶ್ರೇಯಾಂಕ) ಪಟ್ಟಿಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ 45ನೇ ಸ್ಥಾನ ಪಡೆದಿದೆ. ಸಿಮಾಗೋ ಸೊಸೈಟಿ ಎಂಬ ಸಂಸ್ಥೆ ಈ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದೆ.
ವಿಶ್ವವಿದ್ಯಾನಿಲಯದ ಸಾಧನೆ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಉಪಕುಲಪತಿಗಳಾದ ಪ್ರೊಫೆಸರ್ ಜೋಗನ್ ಶಂಕರ್  "ನಮ್ಮ ಸಿಬ್ಬಂದಿ ಮತ್ತು ಸಂಶೋಧನಾ ತರಬೇತುದಾರರು, ವಿದ್ವಾಂಸರಿಂದ ಸಂಶೋಧನೆಯ ಕಾರ್ಯಗಳ ಗುಣಮಟ್ಟ, ಪ್ರಕಟಣೆ ಮತ್ತು ವಿವಿಧ ಯೋಜನೆಗಳ ಅನುಷ್ಠಾನ ಸೇರಿದಂತೆ ನಾನಾ ಕಾರ್ಯಗಳಿಂಡಾಗಿ ಈ ಸಾಧನೆ ಮಾಡಲು ನಮಗೆ ಸಾಧ್ಯವಾಗಿದೆ. ನಮ್ಮ ಶಿಕ್ಷಣತಜ್ಞರು, ಸಂಶೋಧಕರು ಮತ್ತು ಸಂಶೋಧನಾ ನಿರತ ವಿದ್ಯಾರ್ಥಿಗಳು ಕೈಗೊಂಡ ಸಂಶೋಧನೆಯು ಸಂಸ್ಥೆಯು ಶ್ರೇಯಾಂಕದಲ್ಲಿ ಆದ್ಯತೆ ಪಡೆದಿದೆ. ಎಂದು ಹೇಳಿದರು.
ಸಿಮಾಗೋ ಸೊಸೈಟಿ ಅಥವಾ ಸಿಮಾಗೋ  ಇನ್ಸ್ಟಿಟ್ಯೂಶನ್ಸ್ ರ್ಯಾಂಕಿಂಗ್ಸ್ ವಿಶ್ವದಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಿತ ಸಂಸ್ಥೆಗಳ ಮೌಲ್ಯಮಾಪನ ಮಾಡಬಲ್ಲ  ಮೌಲ್ಯಮಾಪನ ಸಂಸ್ಥೆಯಾಗಿದೆ.ಶೈಕ್ಷಣಿಕ ಸಂಶೋಧನಾ-ಸಂಬಂಧಿತ ಸಂಸ್ಥೆಗಳ ಒಂದು ಸಂಯೋಜನೆಯು ಈ ಸಂಸ್ಥೆಗಳ ಶ್ರೇಣಿಯನ್ನು ನಿರ್ಧರಿಸಲಿದೆ.ಯಾವುದೇ ಶಿಕ್ಷಣ ಸಂಸ್ಥೆಗಳ ಸಂಶೋಧನಾ ಕಾರ್ಯಕ್ಷಮತೆ, ನಾವೀನ್ಯತೆ ಉತ್ಪನ್ನಗಳು ಮತ್ತು ಸಾಮಾಜಿಕ ಪ್ರಭಾವದ ಆಧಾರದ ಮೇಲೆ ರ್ಯಾಂಕಿಂಗ್ ನಿರ್ಧಾರವಾಗಲಿದೆ.
2018ರ ಸಿಮಾಗೋ ಜಾಗತಿಕ ಶ್ರೇಯಾಂಕದ ಪ್ರಕಾರ, ಕುವೆಂಪು ವಿಶ್ವವಿದ್ಯಾನಿಲಯವು ಭಾರತದಲ್ಲಿ 45ನೇ ಸ್ಥಾನ್ಬ ಪಡೆದಿದ್ದರೆ ಏಷ್ಯಾ ಖಂಡದಲ್ಲಿ 220ನೇ ಸ್ಥಾನದಲ್ಲಿದೆ.ಜಾಗತಿಕವಾಗಿ 620ನೇ ರ್ಯಾಂಕ್ ಹೊಂದಿದೆ.
SCROLL FOR NEXT