ರಾಜ್ಯ

ಆರೋಪಿಗಳಿಂದ ಹಣ ಸಂಗ್ರಹಿಸಿ ಹಂಪಿ ಸ್ಮಾರಕ ಪುನರ್ ನಿರ್ಮಿಸಿ: ಕೋರ್ಟ್ ಆದೇಶ

Shilpa D
ಬಳ್ಳಾರಿ: ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಸ್ಮಾರಕಗಳನ್ನು ಬೀಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ಕುಆರೋಪಿಗಳಿಂದ ಹಣ ಸಂಗ್ರಹಿಸಿ ಸ್ಮಾರಕಗಳನ್ನು ಪುನ್ ನಿರ್ಮಿಸುವಂತೆ ಹೊಸಪೇಟೆ ಜೆಎಂಎಫ್ ಸಿ ನ್ಯಾಯಾಲಯ ಆದೇಶಿಸಿದೆ.
ಮಧ್ಯಪ್ರದೇಶದ. ಆಯುಷ್,  ರಾಜಾ ಬಾಬು ಚೌಧರಿ, ರಾಜ್ ಆರ್ಯನ್, ಮತ್ತು  ಬಿಹಾರದ ರಾಕೇಶ್ ಕುಮಾರ್ ಚೌಧರಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ, ಬಂಧಿತ ಆರೋಪಿಗಳನ್ನು ಸ್ಮಾರಕ ಧ್ವಂಸಗೊಳಿಸಿದ ಸ್ಥಳಕ್ಕೆ ಕರೆದೊಯ್ದು ಪ್ರತಿ ಆರೋಪಿಯಿಂದ ತಲಾ 70 ಸಾವಿರ ರು ಹಣ ದಂಡವಾಗಿ ವಸೂಲಿ ಮಾಡುವಂತೆ ಜಡ್ಜ್ ಪೂರ್ಣಿಮಾ ಯಾಧವ್ ಆದೇಶಿಸಿದ್ದಾರೆ.
ಹಂಪಿಯಲ್ಲಿ ಬಿದ್ದ ಕಂಬಗಳನ್ನ ಯುವಕರನ್ನು ಕರೆದುಕೊಂಡು ಹೋಗಿ ಪುನ ಸ್ಥಾಪಿಸಲಾಗಿದೆ ಎಂದು ಹಂಪಿ ಮಿನಿ ಸರ್ಕಲ್ ನ ಪ್ರಾಚ್ಯ ಸಂಶೋಧನಾ ಇಲಾಖೆ ಡೆಪ್ಯುಟಿ ಸೂಪರಿಂಡೆಂಟ್ ಕಾಳಿಮುತ್ತು ತಿಳಿಸಿದ್ದಾರೆ.
ಫೆಬ್ರವರಿ 8 ರಂದು 4 ಆರೋಪಿಗಳನ್ನು ಬಂಧಿಸಲಾಗಿದೆ, ಆರೋಪಿಗಳಿಗೆ 1 ಲಕ್ಷದವರೆಗೆ ದಂಡ ಹಾಗೂ ಕನಿಷ್ಠ 2 ವರ್ಷ ಶಿಕ್ಷೆ ವಿಧಿಸಬಹುದಾಗಿದೆ ಎಂದಪ ಹೇಳಲಾಗಿದೆ.
SCROLL FOR NEXT