ರಾಜ್ಯ

ಅವಧಿಗೂ ಮುನ್ನವೇ ಶೈಕ್ಷಣಿಕ ವರ್ಷ ಆರಂಭಕ್ಕೆ ಸಿಎಂ ಕುಮಾರಸ್ವಾಮಿ ಚಿಂತನೆ!

Shilpa D
ಬೆಂಗಳೂರು: ಖಾಸಗಿ ಶಾಲೆ ಮತ್ತು ಕಾಲೇಜುಗಳು ಬೇಗನೇ ತರಗತಿ ಆರಂಭಿಸುತ್ತವೆ. ಈ ಹಿನ್ನೆಲೆಯಲ್ಲಿ  ಸರ್ಕಾರಿ ಶಾಲಾ- ಕಾಲೇಜುಗಳನ್ನು ಶೀಘ್ರವೇ ಆರಂಭಿಸಲು ಚಿಂತನೆ ನಡೆಸುತ್ತಿರುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ. 
ಮಹಾರಾಣಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಭಾರತೀಯ ಉನ್ನತ ಶಿಕ್ಷಣ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬೇಸಿಗೆ ರಜೆ ನಂತರ ಪ್ರತಿ ವರ್ಷ ಮೇ 29ರಿಂದ ಸರ್ಕಾರಿ ಶಾಲೆಗಳ ತರಗತಿ ಆರಂಭಿಸಲಾಗುತ್ತಿತ್ತು. ಆದರೆ, ಖಾಸಗಿ ಶಾಲೆಗಳು ಬೇಗ ಆರಂಭಿಸುತ್ತವೆ. ಇದಕ್ಕೆ ಸೆಡ್ಡು ಹೊಡೆಯುವ ಉದ್ದೇಶದಿಂದ ಮೇ ಮೊದಲ ವಾರದಲ್ಲೇ ತರಗತಿ ಆರಂಭಿಸಲು ಚಿಂತಿಸಲಾಗಿದೆ.
ಬೇಗ ಆರಂಭಿಸುವುದರಿಂದ ಶಿಕ್ಷಕರ ರಜೆ ಕಡಿತವಾಗಲಿದೆ. ಹೀಗಾಗಿ ಈ ಬಗ್ಗೆ ಶಿಕ್ಷಕರೊಂದಿಗೆ ರ್ಚಚಿಸಿ ಅಂತಿಮ ದಿನಾಂಕ ನಿಗದಿ ಮಾಡುವುದಾಗಿ ತಿಳಿಸಿದರು.
SCROLL FOR NEXT