ರಾಜ್ಯ

ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರಾಜ್ಯಪಾಲರಿಂದ ಚಾಲನೆ

Nagaraja AB

ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್  ವಿಸ್ತರಣೆಗೆ ರಾಜ್ಯಪಾಲ ವಜೂಭಾಯಿ ವಾಲಾ ಇಂದು ಶಂಕುಸ್ಥಾಪನೆ ನೆರವೇರಿಸಿದರು.

 ಪ್ರಸ್ತುತ ಟರ್ಮಿನಲ್  ವಿಸ್ತಾರ 19, 509 ಚದರ ಮೀಟರ್ ಇದೆ. ಹೊಸದಾಗಿ 11, 343 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್  ನಿರ್ಮಿಸಲಾಗುತ್ತಿದೆ.

ಈಗ ದಟ್ಟಣೆಯ ಅವಧಿಯಲ್ಲಿ ಪ್ರತಿ ಗಂಟೆಗೆ 730 ಪ್ರಯಾಣಿಕರಿಗೆ ಬೋರ್ಡಿಂಗ್ ಅವಕಾಶ ಕಲ್ಪಿಸುವ ಸಾಮರ್ಥ್ಯ ಇದೆ. ಹೊಸ ಟರ್ಮಿನಲ್ ನಿರ್ಮಾಣದ ಬಳಿಕ ಪ್ರತಿ ಗಂಟೆಗೆ 1 ಸಾವಿರ ಪ್ರಯಾಣಿಕರಿಗೆ ಬೋರ್ಡಿಂಗ್ ಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ದೊರಕಲಿದೆ.  ವಾರ್ಷಿಕ ಪ್ರಯಾಣಿಕರ ಸಂಖ್ಯೆ 20 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಲಿದೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರ ವಿಭಾಗದಲ್ಲಿ ಎರಡು ಹೊಸ ಬ್ಯಾಗೇಜ್ ಕನ್ವೆಯರ್ ಮತ್ತು ದೇಶಿಯ ಪ್ರಯಾಣಿಕರ ವಿಭಾಗದಲ್ಲಿ ಒಂದು ಹೊಸ ಕನ್ವೆಯರ್ ಅಳವಡಿಸಲಾಗುತ್ತದೆ. ಎರಡು ಹೊಸ ಪ್ರಯಾಣಿಕರ ಬೋರ್ಡಿಂಗ್ ಸೇತುವೆಗಳನ್ನು ನಿರ್ಮಿಸಲಾಗುತ್ತದೆ.
ಪ್ರಯಾಣಿಕರ ವಿಶ್ರಾಂತಿಗೆ ಬೃಹತ್ ಕೊಠಡಿ, ಉಪಹಾರ ಗೃಹ, ಪ್ರಯಾಣಿಕರ ಭೇಟಿಗೆ ಸ್ಥಳಾವಕಾಶ, ಪ್ರಥಮ  ಚಿಕಿತ್ಸಾ ಕೊಠಡಿಗಳನ್ನು ಈ ಯೋಜನೆಯಲ್ಲಿ ನಿರ್ಮಿಸಲಾಗುತ್ತದೆ
SCROLL FOR NEXT