ಬೆಂಗಳೂರು: ಭಾರತೀಯ ರಕ್ಷಣಾ ವಲಯದ ಪ್ರಮುಖ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿ. (ಎಚ್ಎಎಲ್) , ಭಾರತೀಯ ಸೇನೆಗೆ ಮೂರು ಅತ್ಯಾಧುನಿಕ ಎಎಲ್‍ಎಚ್-ಎಂಕೆ 3 ಹೆಲಿಕಾಪ್ಟಗಳನ್ನು ಹಸ್ತಾಂತರಿಸಿದೆ.
ಏರೋ-ಇಂಡಿಯಾ-2019 ಪ್ರದರ್ಶನದ ವೇಳೆ ಹೆಲಿಕಾಪ್ಟರ್ ಗಳನ್ನು ಸೇನೆಗೆ ಔಪಚಾರಿಕವಾಗಿ ಹಸ್ತಾಂತರಿಸಲಾಯಿತು.
41 ಎಎಲ್ಎಚ್-ಎಂಕೆ -3 ಹೆಲಿಕಾಪ್ಟರ್ ಗಳ ಪೂರೈಕೆ ಗುತ್ತಿಗೆ ಪಡೆದಿದ್ದ ಎಚ್ಎಎಲ್, ಗಡುವಿನ ಆರು ತಿಂಗಳ ಮೊದಲೇ ಮೂರು ಹೆಲಿಕಾಪ್ಟರ್ ಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ.
ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಎಚ್.ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಅವರು ಔಪಚಾರಿಕವಾಗಿ ಹೆಲಿಕಾಪ್ಪರ್ ದಾಖಲೆಗಳನ್ನು ಲೆಫ್ಟಿನೆಂಟ್ ಜನರಲ್ ಕನ್ವಾಲ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಎಎಲ್‍ಎಚ್ ಹೆಲಿಕಾಪ್ಟರ್ ಗಳ ಪೂರೈಕೆಗಾಗಿ ರಕ್ಷಣಾ ಸಚಿವಾಲಯ ಮತ್ತು ಎಚ್ಎಎಲ್ ನಡುವೆ ಇತ್ತೀಚೆಗೆ ಸಹಿ ಹಾಕಲಾಗಿತ್ತು.