ತುಮಕೂರು: ಪ್ರೇಮ ವೈಫಲ್ಯ,ಸೈನೈಡ್ ನುಂಗಿ ಯುವಪ್ರೇಮಿಗಳ ಆತ್ಮಹತ್ಯೆ! 
ರಾಜ್ಯ

ತುಮಕೂರು: ಪ್ರೇಮ ವೈಫಲ್ಯ, ಸೈನೈಡ್ ನುಂಗಿ ಯುವಪ್ರೇಮಿಗಳ ಆತ್ಮಹತ್ಯೆ!

ಪ್ರೀತಿಗೆ ಮನೆಯವರ ಅಡ್ಡಿಯಿಂದಗಿ ಬೇಸತ್ತ ಯುವಪ್ರೇಮಿಗಳು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.

ತುಮಕೂರು: ಪ್ರೀತಿಗೆ ಮನೆಯವರ ಅಡ್ಡಿಯಿಂದಗಿ ಬೇಸತ್ತ ಯುವಪ್ರೇಮಿಗಳು ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಶಿರಾದಲ್ಲಿ ನಡೆದಿದೆ.
ಶಿರಾ ತಾಲೂಕಿನ ಭೂವನಹಳ್ಳಿಯಲ್ಲಿ ನಡೆದ ಘಟನೆಯಲ್ಲಿ .ಚೇತನ್ (25) ಹಾಗೂ ನಿವೇದಿತಾ (20) ದುರಂತ ಸಾವಿಗೀಡಾಗಿದ್ದಾರೆ. 
ಭೂವನಹಳ್ಳಿ ನಿವಾಸಿಯಾಗಿದ್ದ ಚೇತನ್ ನಾಯಕನಹಟ್ಟಿಯಲ್ಲಿರುವ ವಿಶ್ವಕರ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತ ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿಯಾಗಿದ್ದ ನಿವೇದಿತಾಳನ್ನು ಪ್ರೀತಿಸುತ್ತಿದ್ದ. ಈ ಜೋಡಿ ಹಲವು ತಿಂಗಳಿನಿಂದ ಪ್ರೇಮದಲ್ಲಿದ್ದರೂ ಮನೆಯವರು ಇವರ ಪ್ರೀತಿಗೆ ಸಮ್ಮತಿಸಿರಲಿಲ್ಲ.
ಕಳೆದ ಒಂದೂವರೆ ತಿಂಗಳ ಹಿಂದೆ ಮನೆಯವರ ಬಲವಂತಕ್ಕೆ ಯುವಕ ಚೇತನ್ ಬೇರೊಬ್ಬಳನ್ನು ಮದುವೆಯಾಗಿದ್ದ,  ಆದರೆ ತಾನು ಪ್ರೀತಿಸಿದ್ದ ಹುಡುಗಿಯಿಂದ ಬೇರಾಗಲು ಸಾಧ್ಯವಾಗಿರಲಿಲ್ಲ. 
ಇದೇ ಕಾರಣಕ್ಕೆ ಇಬ್ಬರೂ ರಾತ್ರೋರಾತ್ರಿ ರಾತ್ರಿ ಭೂವನಹಳ್ಳಿಯ ಹೊಲಕ್ಕೆ ಆಗಮಿಸಿದ್ದು ಅಲ್ಲಿ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಜಾನೆ ಹೊಲದಲ್ಲಿ ಜೋಡಿ ಶವಗಳನ್ನು ಕಂಡ ಗ್ರಾಮಸ್ಥರು ಪೋಲೀಸರಿಗೆ ಮಾಹಿತಿ ನೀಡಿದ್ದು ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT