ರಾಜ್ಯ

ಬೆಂಗಳೂರು: ನಾಯಿಯ ವಿಚಾರಕ್ಕೆ ಜಗಳ, ಪ್ರಾಣಿಗಳಂತೆ ಬಡಿದಾಡಿಕೊಂಡ ಕುಟುಂಬ!

Raghavendra Adiga
ಬೆಂಗಳೂರು: ನಾಯಿಯೊಂದರ ಕಾರಣದಿಂದ ಎರಡು ಕುಟುಂಬಗಳು ಪರಸ್ಪರ ಹೊಡೆದಾಡಿಕೊಂಡು ಪೋಲೀಸರಿಗೆ ದೂರು ಸಲ್ಲಿಸಿರುವ ಘಟನೆ ಬೆಂಗಳುರಿನ ಎಲೆಕ್ಟ್ರಾನಿಕ್ ಸಿಟಿಯಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಸೆಲೆಬ್ರಿಟಿ ಲೇಔಟ್ ನಲ್ಲಿ ವಾಸವಿದ್ದ ಎರಡು ಕುಟುಂದ ಮಧ್ಯೆ ಕಾದಾಟಕ್ಕೆ ಕಾರಣವಾಗಿದ್ದದ್ದು ಒಂದು ಪೊಮೆರಿಯನ್ ನಾಯಿ!
ಫೆ.20ರಂದು ತಮ್ಮ ಮೂರು ವರ್ಷದ ಮಗುವಿಗೆ ಪರಚಿದೆ ಎಂದು ಕುಟುಂಬವೊಂದು ಜಗಳಕ್ಕೆ ನಾಂದಿ ಹಾಡಿದೆ. ಅಲ್ಲದೆ ನಾಯಿಯು ಮಗುವಿನ ಕಾಲಿಗೆ ಕಚ್ಚಿದೆ ಎಂದೂ ಆ ಕುಟುಂಬ ವಾದಿಸಿದೆ. ಇದು ನಾಯಿಯ ಮಾಲೀಕರಾಗಿದ್ದ ಕುಟುಂಬಕ್ಕೆ ಹಿಡಿಸಲಿಲ್ಲ. ಅವರು ಇದನ್ನು ಅಲ್ಲಗೆಳೆದಿದ್ದಾರೆ. ಆ ವೇಳೆ ಎರಡೂ ಕುಟುಂಬದ ನಡುವೆ ವಾಗ್ವಾದ ಬಿರುಸಾಗಿದ್ದು ಮರದ ಹಲಗೆ, ಇಟ್ಟಿಗೆಗಳಿಂದ ಹಿಡೆದಾಡಿಕೊಂಡಿದ್ದಾರೆ. ಬಳಿಕ ಇಬ್ಬರೂ ಪೋಲೀಸ್ ಠಾಣೆಗೆ ತೆರಳಿ ಎರಡು ಕುಟುಂಬದ ವಿರುದ್ಧ ಪರಸ್ಪರರು ದೂರು ದಾಖಲಿಸಿದ್ದಾರೆ.
"ನನ್ನ ಮೂರು ವರ್ಷದ ಮಗು ಶಾಲೆಯಿಂದ ಹಿಂತಿರುಗುತ್ತಿದ್ದ. ನನ್ನ ಪತ್ನಿ ಆತನನ್ನು ಮನೆಗೆ ಕರೆತರುವಾಗ ನಾನು ಹೊರಗೆ ಹೊರಟಿದ್ದೆ. ಆಗ ಇದ್ದಕ್ಕಿದ್ದಂತೆ ಮಗು ಜೋರಾಗಿ ಅಳುವುದು ಕೇಳಿದೆ. ನಾನು ಹಿಂದೆ ಬಂದು ನೋಡಲು ನಾಯಿಯೊಂದು ರಸ್ತೆ ಮೇಲೆ ಬಿದ್ದಿದ್ದ ನನ್ನ ಮಗುವಿನ ಮೇಲೆ ಆಕ್ರಮಣ ನಡೆಸಿತ್ತು, ನನ್ನ ಮಗನಿಗೆ ನಾಯಿ ಬಲವ್ಬಾಗಿ ಪರಚಿದ್ದಷ್ಟೇ ಅಲ್ಲದೆ ಕಾಲುಗಳಿಗೆ ಕಚ್ಚಿ ಗಾಯಮಾಡಿದೆ. ಆದರೆ ಆ ನಾಯಿಯ ಮಾಲೀಕ 17  ವರ್ಷದ ಯುವಕ ಮಾತ್ರ ತಾನು ಫೋನ್ ನಲ್ಲಿ ಮಾತನಾಡುವುದರಲ್ಲಿ ಬ್ಯುಸಿ ಇದ್ದನು ನಾನು ಅವನನ್ನು ಕರೆದು ಗದರಿದಾಗಲೂ ಆತ ನನ್ನಲ್ಲಿ ಕ್ಷಮೆ ಕೇಳುವ ಬದಲು ಅಸಭ್ಯ ಮಾತುಗಳಿಂದ ನಿಂದಿಸಿದ್ದಾನೆ"ಮಗುವಿನ ತಂದೆ ಮಧು ಎಚ್ಆರ್ ಹೇಳಿದ್ದಾರೆ.
ಆ ಬಳಿಕ ಯುವಕನ ಕುಟುಂಬದೊಡನೆ ಮಧು ಜಗಳವಾಡಿದ್ದಾರೆ. ಆಗ ಆ ಕುಟುಂಬ ಮತ್ತೂ ಜೋಆಗಿ ಮಾತನಾಡಿದ್ದಲ್ಲದೆ ಮದು ಅವರಿಗೆ ಇಟ್ಟಿಗೆಗಳಿಂದ ಹೊಡೆದಿದೆ. ಆ ವೇಳೆ ಮಧು ಸೋದರ ಮಂಜುನಾಥ್ ಆಗಮಿಸಿದ್ದು ಆತ ತನ್ನ ಅಣ್ಣನ ಸಹಾಯಕ್ಕೆ ಧಾವಿಸಿದ್ದಾನೆ. ಆದರೆ ಅವನ ಮೇಲೆ ಸಹ ಆ ಯುವಕನ ಕುಟುಂಬ ದಾಳಿ ನಡೆಸಿತ್ತು.
ಆದರೆ ಈ ವೇಳೆ ಯುವಕ ತಂದೆ ಹಾಗೂ ನಾಯಿಯ ಮಾಲೀಕರಾದ ಮಣಿಗಂಧನ್ ಹೇಳುವುದೇ ಬೇರೆ. ಅವರು ವಿವರಿಸಿದಂತೆ "ನಾಯಿ ಮಗುವನ್ನು ಕಚ್ಚಿಲ್ಲ, ಕೇವಲ ಪರಚಲು ಮುಂದಾಗಿದೆ. ಆದರೆ ಅಷ್ಟರಲ್ಲಿ ಮಗು ಹೆದರಿ ಓಡಲು ಮುಂದಾದಾಗ ಅವನು ರಸ್ತೆ ಮೇಲೆ ಬಿದ್ದಿದ್ದು ಅಳಲು ಪ್ರಾರಂಭಿಸಿದ್ದಾನೆ. ನಾಯಿ ಬಾಯಿಯಲ್ಲಿ ಬಾಲಕನ ಒಂದು ಶೂ ಲೇಸ್ ಇರುವುದನ್ನು ನಾವು ಕಂಡೊದ್ದೇವೆ" 
"ನಾನು ಮನೆಗೆ ಬರುವ ವೇಳೆ ಅಪಾರ್ಟ್ ಮೆಂಟ್ ಮುಂದೆ ಆರು ಜನರ ಗುಂಪು ಗಲಾಟೆ ಮಾಡುತ್ತಿದ್ದದ್ದು ಕಂಡೆ, ಗುಂಪು ನನ್ನ ಮಗನಿಗೆ ಹೊಡೆಯುತ್ತಿದ್ದರು. ಆಗ ನಾನು ಅವರಿಂದ ನನ್ನ ಮಗನನ್ನು ಬಿಡಿಸಲು ಮುಂದಾದೆ. ಆದರೆ ಅವರು ಹೂಕುಂಡ, ಇಟ್ಟಿಗೆಗಳಿಂದ ನನಗೆ ಸಹ ಹೊಡೆದಿದ್ದಾರೆ." ಮಣಿಗಂಧನ್ ಹೇಳಿದ್ದಾರೆ.
SCROLL FOR NEXT