ರಾಜ್ಯ

ಮಂಡ್ಯ: ಗುರು ಸಹೋದರನ ಮದುವೆಯಾಗುವಂತೆ ಹುತಾತ್ಮ ಯೋಧನ ಪತ್ನಿಗೆ ಒತ್ತಡ?

Lingaraj Badiger
ಮಂಡ್ಯ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ಸಿಆರ್ ಪಿಎಫ್ ಯೋಧ ಗುರು ಅವರ ಕುಟುಂಬಕ್ಕೆ ನೆರವಿನ ರೂಪದಲ್ಲಿ ಸಾಕಷ್ಟು ಹಣ ಬಂದಿದ್ದು, ಆ ಹಣವನ್ನು ಹಂಚಿಕೊಳ್ಳಲು ಕುಟುಂಬದಲ್ಲಿಯೇ ಕಿತ್ತಾಟ ಶುರುವಾಗಿದೆ ಎನ್ನಲಾಗಿದೆ.
ನೆರವಿನ ರೂಪದಲ್ಲಿ ಬಂದ ಕುಟುಂಬದಲ್ಲಿಯೇ ಉಳಿಸಿಕೊಳ್ಳಲು ಹುತಾತ್ಮ ಯೋಧನ ಪತ್ನಿ 25 ವರ್ಷದ ಕಲಾವತಿಗೆ ಗುರು ಅವರ ಕಿರಿಯ ಸಹೋದರನ ಮದುವೆಯಾಗುವಂತೆ ಒತ್ತಡ ಹಾಕಲಾಗುತ್ತಿದೆ. ಆದರೆ ಎರಡನೇ ಮದುವೆಗೆ ನಿರಾಕರಿಸಿರುವ ಕಲಾವತಿ, ಈ ಸಂಬಂಧ ಮಂಡ್ಯ ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಎರಡನೇ ಮದುವೆ ವಿಚಾರ ಇತ್ಯರ್ಥ ಮಾಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗುರು ಕುಟುಂಬಕ್ಕೆ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ..
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಂಡ್ಯ ಪೊಲೀಸರು, ಅದು ಅವರ ಕುಟುಂಬದ ವೈಯಕ್ತಿಕ ವಿಚಾರ ಮತ್ತು ಅತ್ಯಂತ ಸೂಕ್ಷ್ಮ ವಿಚಾರ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡನೇ ಮದುವೆ ವಿಚಾರವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಕಲಾವತಿ, "ಇವೆಲ್ಲವೂ ಸತ್ಯಕ್ಕೆ ದೂರವಾದ್ದು, ನಮ್ಮ ಮೇಲೆ ಆಗದವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
SCROLL FOR NEXT