ಸಂಗ್ರಹ ಚಿತ್ರ 
ರಾಜ್ಯ

ಕೋಲಾರ: ತುಂಟತನಕ್ಕೆ ಬೇಸತ್ತು ಮಗನನ್ನೇ ಸಿಗರೇಟ್ ನಿಂದ ಸುಟ್ಟ ತಂದೆ!

: ಮಗು ತುಂಟಾಟವಾಡುವುದು ಹೆಚ್ಚಾದ ಕಾರಣ ಕೋಪಗೊಂಡ ತಂದೆಯೊಬ್ಬ ತನ್ನದೇ ಮಗನನ್ನು ಸಿಗರೇಟ್ ನಿಂದ ಪದೇ ಪದೇ ಸುಟ್ಟ ಕಾರಣ ಚಿಕಿತ್ಸೆ ಫಲಕಾರುಇಯಾಗದೆ ಮಗು ಸಾವನ್ನಪ್ಪಿರುವ ಘಟನೆ.....

ಮಾಲೂರು: ಮಗು ತುಂಟಾಟವಾಡುವುದು ಹೆಚ್ಚಾದ ಕಾರಣ ಕೋಪಗೊಂಡ ತಂದೆಯೊಬ್ಬ ತನ್ನದೇ ಮಗನನ್ನು ಸಿಗರೇಟ್ ನಿಂದ ಪದೇ ಪದೇ ಸುಟ್ಟ ಕಾರಣ ಚಿಕಿತ್ಸೆ ಫಲಕಾರುಇಯಾಗದೆ ಮಗು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಮಾಲೂರಿನಲ್ಲಿ ನಡೆದಿದೆ.
ಮಂಗಳವಾರ ನಡೆದ ಘಟನೆಯಲ್ಲಿ ಪೃಥ್ವಿ (3)  ಸಾವನ್ನಪ್ಪಿದ ದುರ್ದೈವಿ ಮಗು. ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ವಾಸವಿದ್ದ ಹರೀಶ್ ತನ್ನ ಮಗನಿಗೆ ಈ ರೀತಿ ಸಿಗರೇಟ್ ನಿಂದ ಪದೇ ಪದೇ ಸುಟ್ಟು ಸಾಯಿಸಿದ್ದಾನೆ. ಮಗುವಿನ ಮೈತುಂಬಾ ಸಿಗರೇಟ್ ನಿಂದ ಸುಟ್ಟ ಗಾಯಗಳಾಗಿದ್ದು ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರ್ಗೆ ದಾಖಲಿಸಿದರೂ ಪ್ರಯೋಜನವಾಗದೆ ಮಗು ಸಾವನ್ನಪ್ಪಿದೆ ಎಂದು ಪೋಲೀಸರು ಹೇಳಿದ್ದಾರೆ.
ಪ್ರಥ್ವಿ ಬಹಳ ತುಂಟಾಟವಾಡುತ್ತಿದ್ದ. ಪೋಷಕರ ಮಾತು ಕೇಳುತ್ತಿರಲಿಲ್ಲ. ಇದರಿಂದ ಪೋಷಕರಾದ ರೀಶ್ ಆಕ್ರೋಶಗೊಡಿದ್ದನು. ಹರೀಶ್ ಆಲ್ಕೋಹಾಲ್, ಧೂಮಪಾನ ವ್ಯಸನಿಯಾಗಿದ್ದ. ಮಗ್ಗುವಿನ ತುಂಟತನ ವಿಪಈತವಾಗಲು ಆತ ಮಗುವಿನ ಮೈಗೆಲ್ಲಾ ಸಿಗರೇಟ್ ನಿಂದ ಸುಟ್ಟು ಹಾಕಲು ತೀರ್ಮಾನಿಸಿದ್ದ ಎಂದು ಕೋಲಾರ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರೋಹಿಣಿ ಕಾಟೊಚ್ ಸೇಪತ್ ಹೇಳಿದ್ದಾರೆ.
ಒಂದು ವಾರದ ಹಿಂದೆ ತನ್ನ ಪತ್ನಿ ಸಮ್ಮುಖದಲ್ಲೇ ಹರಿಶ್ ಮಗುವಿಗೆ ಸಿಗರೇಟ್ ಸ್ಸೋಕಿಸಿ ಸುಡಲು ಯತ್ನಿಸಿದ್ದ.ಮತ್ತು ಆ ಮೂಲಕ ತನ್ನ ಮಾತನ್ನು ಕೇಳುವಂತೆ ಎಚ್ಚರಿಸಿದ್ದ. ಇದಾಗಿ ಮತ್ತೆ ಪದೇ ಪದೇ ತುಂಟಾಟ ನಡೆಸಿದಾಗ ಮೈತುಂಬಾ ಸಿಗರೇಟ್ ನಿಂದ ಸುಟ್ತು ಹಾಕಿದ್ದ. ಆಗ ಮಗು ಮಾತನಾಡಲೂ ಆಗದೆ ಮಲಗಿರಲು ಅವರು ಭಯಗೊಂಡು ಮಗು ಜನ್ಮಿಸಲು ಕಾರಣವಾಗಿದ್ದ ದೇವರ ಸನ್ನಿಧಿಗೆ ಕರೆದೊಯ್ದಿದ್ದಾರೆ.  ಆದರೆ ಸುಟ್ಟ ಗಾಯಗಳಿಂದ ಮಗುವಿಗೆ ಸೋಂಕಿನಿಂದ ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಯುಂಟಾಗಿದೆ ಮತ್ತು ನೋವು ವಿಪರೀತವಾಗಿ ಮಗು ಅಳಲಾರಂಭಿಸಿದೆ. ಆಗ ಅದಾಗಲೇ ಮೂರು ದಿನಗಳಿಂದ ನೋವು ಅನುಭವಿಸುತಿದ್ದ ಮಗುವನ್ನು ಂಆಲೂರು ಸರ್ಕಾರಿ ಆಸ್ಪತ್ರೆಗೆ ದಾಕಲಿಸಲಾಗಿದೆ. ಆದರೆ ಚಿಕಿತ್ಸೆ ಫಲ ನೀಡದೆ ಮಗು ಸಾವನ್ನಪ್ಪಿದೆ.
ಮೃತ ಮಗುವಿನ ತಂದೆ ಹರೀಶ್ ಆಟೋ ಚಾಲಕನಾಗಿದ್ದರೆ ತಾಯಿ ರೇಣುಕಾ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾಳೆ. ಮಗುವಿನ ಅಜ್ಜ ನೀಡಿದ ದೂರಿನ ಅನುಸಾರ ಪೋಲೀಸರು ತನಿಖೆ ನಡೆಸಿದ್ದು ಆರೋಪಿ ಹರೀಶ್ ಹಾಗೂ ಪತ್ನಿ ರೇಣುಕಾ ತಮ್ಮ ತಪ್ಪನ್ನು ಒಪ್ಪಿ ಪೋಲೀಸರಿಗೆ ಶರಣಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT