ರಾಜ್ಯ

ಎರಡು ದಿನಗಳ ಭಾರತ್ ಬಂದ್: ಕರ್ನಾಟಕ ವಿಶ್ವವಿದ್ಯಾನಿಲಯಗಳ ಪರೀಕ್ಷೆ ಮುಂದೂಡಿಕೆ

Raghavendra Adiga
ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಭಾರತ್ ಬಂದ್ ಪ್ರಯುಕ್ತ ನಾಳೆ ನಾಡಿದ್ದು (ಜನವರಿ 8.9)ನಡೆಯಬೇಕಾಗಿದ್ದ ಪರೀಕ್ಷೆಗಳು ಮುಂದೂಡಲಾಗಿದೆ,.
ಮಂಗಳವಾರ, ಬುಧವಾರದಂದು ಸಾರ್ವಜನಿಕ ಸಂಪರ್ಕ ವ್ಯವಸ್ಥೆ ವ್ಯತ್ಯಯವಾಗಬಹುದಾದ ಹಿನ್ನೆಲೆ , ಬೆಂಗಳೂರು ವಿಶ್ವವಿದ್ಯಾನಿಲಯ, ತುಮಕುರು ವಿಶ್ವವಿದ್ಯಾನಿಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾನಿಲಯ ಸೇರಿ ಪ್ರಮುಖ ವಿವಿಗಳು ಪರೀಕ್ಷೆ ಮುಂದೂಡಿ ಆದೇಶಿಸಿದೆ.
ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ತುಮಕೂರು ವಿಶ್ವವಿದ್ಯಾನಿಲಯದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್.ಜಿ.ಎಚ್.ಎಚ್.ಎಸ್) ಸಹ ಬಿ ಫಾರ್ಮಾ ಹಾಗೂ ಡಿ ಫಾರ್ಮಾ ಪರೀಕ್ಷೆ ಮುಂದೂಡಲು ತೀರ್ಮಾನಿಸಿದೆ. ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಬೆಳಗಾಇ ಮಾತ್ರ ಈ ಕುರಿತ ತೀರ್ಮಾನ ಇನ್ನೂ ಕೈಗೊಂಡಿಲ್ಲ.
ಇನ್ನು ಆರ್.ಜಿ.ಎಚ್.ಎಚ್.ಎಸ್ ಈಗ ಮುಂದೂಡಲಾದ ಪರೀಕ್ಷೆಯನ್ನು ಜನವರಿ 17 ಮತ್ತು 18 ರಂದು ನಡೆಸ;ಲು ತೀರ್ಮಾನಿಸಿದೆ. ಆದರೆ ತುಮಕೂರು ಹಾಗೂ ಬೆಂಗಳೂರು ವಿವಿಗಳು ಇನ್ನೂ ಪರೀಕ್ಷ ದಿನಾಂಕವನ್ನು ಪ್ರಕಟಿಸಲಿಲ್ಲ.
ಏತನ್ಮಧ್ಯೆ, ಪರಿಸ್ಥಿತಿ ಹೇಗಿರಲಿದೆ ಎನ್ನುವುದರ ಮೇಲೆ ಶಾಲಾ ಕಾಲೇಜುಗಳಿಗೆ ರಜೆ ಸಾರುವ ಕುರಿತ ತೀರ್ಮಾನಕ್ಕೆ ಬರಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರವು ಅಧಿಕಾರ ನೀಡಿದೆ.ಖಾಸಗಿ ಶಾಲೆ ಸಹ ಇದೇ ರೀತಿ ಅವರಿಗೆ ಸೂಕ್ತ ರೀತಿಯ ತೀರ್ಮಾನಕ್ಕೆ ಬರಲು ಸೂಚಿಸಿದ್ದಾರೆ.
SCROLL FOR NEXT