ರಾಜ್ಯ

ಶುಲ್ಕ ವಿವರ ಫಲಕ ಪ್ರದರ್ಶನಕ್ಕೆ ಖಾಸಗಿ ಶಾಲೆಗಳು ನಕಾರ

Sumana Upadhyaya

ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಶುಲ್ಕ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಕಳೆದ ಮೇ ತಿಂಗಳಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆಗಳು(ನಿರ್ದಿಷ್ಟ ಶುಲ್ಕ ಮತ್ತು ದೇಣಿಗೆ ನಿಯಂತ್ರಣ)(ತಿದ್ದುಪಡಿ) ನಿಯಮ 2018 ಕುರಿತು ಅಧಿಸೂಚನೆ ಹೊರಡಿಸಿತ್ತು. ಅದರ ಪ್ರಕಾರ ಪ್ರತಿವರ್ಷ ಡಿಸೆಂಬರ್ 31ರೊಳಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಶುಲ್ಕ ವಿವರಗಳನ್ನು ಶಿಕ್ಷಣ ಇಲಾಖೆಗೆ ನೀಡಬೇಕು. ಆದರೆ ಖಾಸಗಿ ಶಾಲೆಗಳು ಶುಲ್ಕ ವಿವರಗಳ ಫಲಕ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿವೆ.

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆಗಳ ಸಹಯೋಗ ವ್ಯವಸ್ಥಾಪಕ(ಕೆಎಎಂಎಸ್), ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ, ಆರ್ ಟಿಇ ಕೋಟಾದಡಿ ದಾಖಲಾದ ಮಕ್ಕಳ ಶುಲ್ಕಗಳನ್ನು ಸರ್ಕಾರವೇ ಭರಿಸುವುದರಿಂದ ಪ್ರತಿ ವಿದ್ಯಾರ್ಥಿಗೆ ಎಷ್ಟು ಶುಲ್ಕ ಬೀಳುತ್ತದೆ ಎಂದು ಲೆಕ್ಕಪತ್ರ ನೀಡಲು ಸಾಧ್ಯವಿಲ್ಲ, ಹೀಗಾಗಿ ನಿಯಮದಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿತ್ತು.

ಈ ಕುರಿತು ಮಾಹಿತಿ ನೀಡಿರುವ ಶಿಕ್ಷಣ ಇಲಾಖೆ ಆಯುಕ್ತ ಪಿಸಿ ಜಾಫರ್, ಇದು ಶುಲ್ಕ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸದಿರುವುದಕ್ಕೆ ವಿನಾಯಿತಿಯಲ್ಲ.ನಾವು ಹೈಕೋರ್ಟ್ ನ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದಿದ್ದಾರೆ.

ಹೊಸ ಶುಲ್ಕ ನೀತಿ ಪ್ರಕಾರ, ಮರುಕಳಿಸುವ ವೆಚ್ಚಕ್ಕೆ ಹೊರತಾಗಿ ಹೆಚ್ಚುವರಿ ಶುಲ್ಕ ಖಾಸಗಿ ಶಾಲೆಗಳಲ್ಲಿ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತದೆ. ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಗಳಲ್ಲಿ ಶೇಕಡಾ 70ರಷ್ಟಿದ್ದರೆ ಬಿಬಿಎಂಪಿ ವಲಯಗಳಲ್ಲಿ ಶೇಕಡಾ 100ರವರೆಗೆ ಇರುತ್ತದೆ.

SCROLL FOR NEXT