ರಾಜ್ಯ

ಕ್ಯಾಟ್ ಪರೀಕ್ಷೆ 11 ಮಂದಿ ಟಾಪರ್ ಲ್ಲಿ ಉಡುಪಿಯ ನಿರಂಜನ್ ಪ್ರಸಾದ್

Sumana Upadhyaya

ಮಂಗಳೂರು: ವಿಷಯದ ಮೇಲೆ ಆಳವಾದ ಜ್ಞಾನ ಮತ್ತು ಸಮಯ ನಿರ್ವಹಣೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸಿಗೆ ಅತ್ಯಂತ ಮುಖ್ಯ ಎನ್ನುತ್ತಾರೆ ಕ್ಯಾಟ್-2018ನೇ ಸಾಲಿನ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಉಡುಪಿ ಜಿಲ್ಲೆಯ ಮಣಿಪಾಲದ ನಿರಂಜನ್ ಪ್ರಸಾದ್.

ಕಳೆದ ವರ್ಷ ನವೆಂಬರ್ ನಲ್ಲಿ ಕೋಲ್ಕತ್ತಾದ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಡೆಸಿದ್ದ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ 11 ಮಂದಿ ಅಭ್ಯರ್ಥಿಗಳಲ್ಲಿ ಕರ್ನಾಟಕದ ನಿರಂಜನ್ ಕೂಡ ಒಬ್ಬರಾಗಿದ್ದಾರೆ.

ಕ್ಯಾಟ್ ಪರೀಕ್ಷೆಗೆ ನಡೆಸಿದ ತಯಾರಿ ಬಗ್ಗೆ ಮಾತನಾಡಿದ ಅವರು, ವಿಷಯಗಳಲ್ಲಿ ನಾನು ಎಲ್ಲಿ ದುರ್ಬಲನಾಗಿದ್ದೇನೆ ಎಂಬುದನ್ನು ವಿಶ್ಲೇಷಣೆ ಮಾಡಲು ಹೊರಟೆ. ನನ್ನ ದೌರ್ಬಲ್ಯವನ್ನು ತೊಡೆದು ಹಾಕಲು ಅದರ ಮೇಲೆಯೇ ಗಮನಹರಿಸಿ ಕೆಲಸ ಮಾಡಿದೆ. ಸಮಯ ನಿರ್ವಹಣೆ ಕೌಶಲ್ಯವನ್ನು ಕೂಡ ಕಲಿತೆ. ಅದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೆರವಿಗೆ ಬಂದಿತು. ದೇಶದ ಯಾವುದೇ ಐಐಎಂ ಸಂಸ್ಥೆಯಲ್ಲಿ ಪ್ರವೇಶ ಪಡೆದು ಹಣಕಾಸು ವಿಷಯದಲ್ಲಿ ವಿಶೇಷ ಅಧ್ಯಯನ ಪಡೆಯುವ ಇಚ್ಛೆ ನಿರಂಜನ್ ಪ್ರಸಾದ್ ರದ್ದು.

SCROLL FOR NEXT