ರಾಜ್ಯ

ಭುವನೇಶ್ವರ ರಾಷ್ಟ್ರೀಯ ವಿಜ್ಞಾನ ಸಮ್ಮೇಳನದಲ್ಲಿ ಶಿವಮೊಗ್ಗದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ!

Nagaraja AB

ಶಿವಮೊಗ್ಗ: ಭುವನೇಶ್ವರದಲ್ಲಿ ಕಳೆದ ವರ್ಷ ಡಿಸೆಂಬರ್ 31 ರಂದು ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್ ನಲ್ಲಿ ಶಿವಮೊಗ್ಗದ ಪೊಡಾರ್ ಅಂತಾರಾಷ್ಟ್ರೀಯ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಮಕ್ಕಳ ವಿಜ್ಞಾನಿಗಳು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಶುದ್ಧ ನೀರಿನ ಮೂಲಕ ಕೊಳದ ಪರಿಸರ ವ್ಯವಸ್ಥೆಯ ಸಮತೋಲನ  ಕುರಿತು ರೂಪಿಸಿದ ಯೋಜನೆಗಾಗಿ ಕಿರಿಯರ ವಿಭಾಗದಲ್ಲಿ 8 ನೇ ತರಗತಿಯ ಮೊಹಮ್ಮದ್ ಜುನೈದ್ ಫೀರ್ ಹಾಗೂ ಪಾರಿತೋಷ್   ಎ ಗ್ರೇಡ್ ನೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಹಿರಿಯರ ವಿಭಾಗದಲ್ಲಿ 9 ನೇ ತರಗತಿಯ ಶ್ರೇಯಾ ಮತ್ತು ಆರ್ ಅಧ್ಯಾ, ಅವ್ಯಾಸಾನಿ ಆಪ್ ಅಭಿವೃದ್ದಿಗಾಗಿ ಬಿ ಗ್ರೇಡ್ ನೊಂದಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.  ಮಕ್ಕಳು ಬಳಸುವ ಮೊಬೈಲ್ ಪೋನ್ ಗಳ ಮೇಲ್ವಿಚಾರಣೆಗಾಗಿ  ಈ ಆಪ್ ನ್ನು ಬಳಸಬಹುದಾಗಿದೆ.

ಈ ಆಪ್  ನಿರ್ದಿಷ್ಟ ಸಮಯದ ನಂತರ ಇಂಟರ್ ನೆಟ್ ನ್ನು  ಬಳಸದಂತೆ ಮಕ್ಕಳನ್ನು ನಿರ್ಬಂಧಿಸುತ್ತದೆ ಮತ್ತು ಅದು ಭೇಟಿ ನೀಡಿರುವ ಸಾಮಾಜಿಕ ಮಾಧ್ಯಮಗಳ ಸೈಟ್ ಗಳನ್ನು ಪ್ರವೇಶಿಸಿ ಮಾಹಿತಿ ನೀಡುತ್ತದೆ.

ಈ ವಿದ್ಯಾರ್ಥಿಗಳ ಸಾಧನೆ ಕುರಿತಂತೆ ಮಾತನಾಡಿದ ಶಾಲೆಯ ಪ್ರಾಂಶುಪಾಲ ಸುಖೇಶ್ ಶೃಂಗೇರಿ,  ವಿದ್ಯಾರ್ಥಿಗಳ  ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ದೊರೆಯಬೇಕಾಗಿದೆ.  ಅವರಿಗೆ ನಿರಂತರವಾಗಿ ಬೆಂಬಲಿಸಬೇಕಾಗಿದೆ ಎಂದು ಹೇಳಿದರು.

SCROLL FOR NEXT