ರಾಜ್ಯ

ಗದಗ ಜಿಲ್ಲೆಯ ಕಪ್ಪಟಗುಡ್ಡ ಸದ್ಯದಲ್ಲಿಯೇ ವನ್ಯಜೀವಿ ಅಭಯಾರಣ್ಯ?

Sumana Upadhyaya

ಗದಗ: ವನ್ಯಜೀವಿ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಜಿಲ್ಲೆಯ ಕಪ್ಪಟಗುಡ್ಡ ಬೆಟ್ಟಕ್ಕೆ ವನ್ಯಜೀವಿ ಅಭಯಾರಣ್ಯ ಸ್ಥಾನಮಾನ ನೀಡುವ ದೀರ್ಘಕಾಲದ ಬೇಡಿಕೆ ಈಡೇರುವ ಸಮಯ ಹತ್ತಿರ ಬಂದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಸಲ್ಲಿಸಲಾಯಿತು.

ಗಣಿ ನಿಕ್ಷೇಪಗಳು ಹೆಚ್ಚಾಗಿರುವ ಕಪ್ಪಟಗುಡ್ಡ ಪರ್ವತ ಪ್ರದೇಶ ಮೀಸಲು ಅರಣ್ಯ ಸ್ಥಾನಮಾನ ಹೊಂದಿದ್ದು ಅದನ್ನು ವನ್ಯಜೀವಿ ಅಭಯಾರಣ್ಯವಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಅನುಮೋದನೆ ಸಿಕ್ಕಿದರೆ ಉತ್ತರ ಕರ್ನಾಟಕದಲ್ಲಿ ಮೊದಲ ವನ್ಯಜೀವಿ ಅಭಯಾರಣ್ಯ ಎಂಬ ಹೆಗ್ಗಳಿಕೆಗೆ ಕಪ್ಪಟಗುಡ್ಡ ಪಾತ್ರವಾಗಲಿದೆ.

SCROLL FOR NEXT