ನಾರಾಯಣ ರೆಡ್ಡಿ 
ರಾಜ್ಯ

ವಿದೇಶಗಳಲ್ಲೂ ಖ್ಯಾತಿ ಗಳಿಸಿದ್ದ ಸಾವಯವ ಕೃಷಿಕ, ನಾಡೋಜ ನಾರಾಯಣ ರೆಡ್ಡಿ ನಿಧನ: ಸಿಎಂ ಸಂತಾಪ

ಸಾವಯಕ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ, ಬೆಂಗಳೂರಿನ ನಿವಾಸಿ ಸಾವಯವ ಕೃಷಿಕ ನಾಡೋಜ ನಾರಾಯಣ ರೆಡ್ಡಿ (80) ನಿಧನರಾಗಿದ್ದಾರೆ.

ಬೆಂಗಳೂರು: ಸಾವಯಕ ಕೃಷಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ, ಬೆಂಗಳೂರಿನ ನಿವಾಸಿ ಸಾವಯವ ಕೃಷಿಕ ನಾಡೋಜ ನಾರಾಯಣ ರೆಡ್ಡಿ (80) ನಿಧನರಾಗಿದ್ದಾರೆ. 
ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಸರಳ ಪರಿಹಾರವನ್ನೂ ನಾರಾಯಣ ರೆಡ್ಡಿ ಸೂಚಿಸುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಕೆಲವು ಇತ್ತೀಚಿನ  ಪದ್ಧತಿಗಳನ್ನು ನಾರಾಯಣ ರೆಡ್ಡಿ ಕಟುವಾಗಿ ಟೀಕಿಸುತ್ತಿದ್ದರು. 
ಮೂವರು ಗಂಡುಮಕ್ಕಳು ಹಾಗೂಪತ್ನಿಯನ್ನು ಅಗಲಿರುವ ನಾರಾಯಣ ರೆಡ್ಡಿ ಅವರ ಅಂತ್ಯ ಸಂಸ್ಕಾರ ಜ.14 ರಂದು ಮಧ್ಯಾಹ್ನ ನಡೆಯಲಿದೆ. ಹೋಟೆಲ್​ನಲ್ಲಿ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದ ನಾರಾಯಣ ರೆಡ್ಡಿ, ಆ ನಂತರ ಲಾರಿ ಆಫೀಸಿನಲ್ಲಿ ಪ್ಯೂನ್ ಕೆಲಸಕ್ಕೆ ಸೇರಿಕೊಂಡು, ಅಲ್ಲಿ ಗುಮಾಸ್ತನಾಗಿ, ಮ್ಯಾನೇಜರ್ ಆಗಿ ಕೆಲಸಮಾಡಿದ್ದರು. ನಂತರ 1972 ರಲ್ಲಿ ಮರಳೇನಹಳ್ಳಿ ಬಳಿ ಜಮೀನು ಖರೀದಿಸಿ ಅಲ್ಲಿ ಸಾವಯವ ಕೃಷಿ ಪ್ರಾರಂಭಿಸಿದ್ದರು. 
ಸಾವಯವ ಕೃಷಿಗೆ ಸಂಬಂಧಿಸಿದಂತೆ ಅಪಾರ ಜ್ಞಾನವನ್ನು ಹೊಂದಿದ್ದ ನಾರಾಯಣ ರೆಡ್ಡಿ ಅವರು ಜಪಾನ್​ನ ವಿಶ್ವವಿಖ್ಯಾತ ರೈತ ಫುಕುವೋಕಾ ಅವರ ವಿಚಾರಗಳಿಂದ ಪ್ರೇರಿತರಾಗಿ, ರಾಸಾಯನಿಕ ರಹಿತವಾಗಿ ಸಂಪೂರ್ಣವಾಗಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಅದರಲ್ಲಿ ಯಶಸ್ಸು ಕಂಡಿದ್ದರು.  ಸಾವಯವ ಕೃಷಿ ತಜ್ಞ ನಾರಾಯಣ ರೆಡ್ಡಿ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!