ರಾಜ್ಯ

'ಬೇಟಿ ಬಚಾವೋ' ಯೋಜನೆ ಅನುಷ್ಠಾನ: ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿಯ ಗರಿ!

Raghavendra Adiga
ನವದೆಹಲಿ: ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ "ಬೇಟಿ ಬಚಾವೋ ಬೇಟಿ ಪಢಾವೋ" ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದ ಗದಗ ಜಿಲ್ಲೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ.
"ಬೇಟಿ ಬಚಾವೋ ಬೇಟಿ ಪಢಾವೋ" ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಉವಲ್ಲಿ ಮಹತ್ವದ ಯಶಸ್ಸು ಗಳಿಸಿದ ದೇಶದ ವಿವಿಧ ರಾಜ್ಯಗಳ 25 ಜಿಲ್ಲೆಗಳಿಗೆ ಪ್ರಶಸ್ತಿ ಬಂದಿದ್ದು ಕರ್ನಾಟಕದ ಗದಗ ಸಹ ಇವುಗಳಲ್ಲಿ ಒಂದೆನಿಸಿದೆ.
ಗದಗದಲ್ಲಿ ಈ ಯೋಜನೆ ಜಾರಿಗಾಗಿ ಶ್ರಮಿಸಿದ ಎಲ್ಲರಿಗೆ ಜಿಲ್ಲಾಡಳಿತಕ್ಕೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವೆ ಡಾ ಜಯಮಾಲಾ ಕೃತಜ್ಞತೆ  ಹೇಳಿದ್ದಾರೆ.
ಜನವರಿ 24ರಂದು ನವದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ವಿತರಣೆ ಮಾಡಲಾಗುತ್ತದೆ.
ಇದಕ್ಕೂ ಹಿಂದೆ ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಶ್ವ ಶೌಚಗೃಹ ದಿನಾಚರ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಗದಗ ಜಿಲ್ಲೆ ಏಳನೇ ಸ್ಥಾನ ಪಡೆದಿತ್ತು.
SCROLL FOR NEXT