ಸಂಗ್ರಹ ಚಿತ್ರ 
ರಾಜ್ಯ

ಸೈಬರ್ ಕಳ್ಳರ ಕರಾಮತ್ತು: ಚಿತ್ರ ಸಂತೆಯಲ್ಲಿ ಪತ್ರಕರ್ತನಿಗೆ 80 ಸಾವಿರ ರೂ. ವಂಚನೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಂತೆ ನಟಿಸಿ ಹೆಸರಾಂತ ದಿನಪತ್ರಿಕೆಯೊಂದರ ಪತ್ರಕರ್ತನಿಗೆ 80 ಸಾವಿರ ರು. ವಂಚಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ.

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯಂತೆ ನಟಿಸಿ ಹೆಸರಾಂತ ದಿನಪತ್ರಿಕೆಯೊಂದರ ಪತ್ರಕರ್ತನಿಗೆ 80 ಸಾವಿರ ರು. ವಂಚಿಸಿದ ಘಟನೆ ಬೆಂಗಳುರಿನಲ್ಲಿ ನಡೆದಿದೆ. ವಂಚನೆಗೀಡಾಗಿರುವ ಪತ್ರಕರ್ತ ಇದೀಗ ಪೋಲೀಸರಿಗೆ ದೂರು ಸಲ್ಲಿಸಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.
ಜನವರಿ 6ರಂದು ನಗರದ ಕುಮಾರ ಕೃಪಾ ರಸ್ತೆಯಲ್ಲಿ ನಡೆದಿದ್ದ ಚಿತ್ರಸಂತೆಯ ಸಮಯ ಈ ವಂಚನೆ ನಡೆದಿದೆ. ಚಿತ್ರಸಂತೆಯ ವರದಿಗಾಗಿ ಬಂದಿದ್ದ ಪತ್ರಕರ್ತನನ್ನು ಆರೋಪಿ ತಾನು ಸ್ಟೇಟ್ ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ಹಾಗೆಯೇ ಆತ ಪತ್ರಕರ್ತನ ಬ್ಯಾಂಕಿಂಗ್ ವಿವರಗಳನ್ನು ಕಲೆ ಹಾಕಿದ್ದು ಅಂತಿಮವಾಗಿ ಖಾತೆಯಲ್ಲಿದ್ದ 80 ಸಾವಿರ ರು. ಎಗರಿಸಿದ್ದಾನೆ.
ಸುರೇಶ್ (ಹೆಸರು ಬದಲಿಸಿದೆ)  ಸಲ್ಲಿಸಿರುವ ದೂರಿನನ್ವಯ ಅವರು  ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದಿದ್ದ ಚಿತ್ರಸಂತೆಯ ಕುರಿತು ವರದಿ ಮಾಡಲು ತೆರಳಿದ್ದಾರೆ.. "ನಾನು ಎಟಿಎಂ ಒಳಗೆ ಹೋದಾಗ, ಆತ ನನಗೆ ಆನ್ ಲೈನ್ ಬ್ಯಾಂಕಿಂಗ್ ಸೇವೆ ಚಾಲನೆ ಮಾಡಿಕೊಡುವುದಾಗಿ ಹೇಳಿದ್ದ.ನಾನು ಇದಾಗಲೇ ಸ್ವಲ್ಪ ದಿನಗಳಿಂದ ಅದನ್ನು ಚಾಲನೆಗೊಳಿಸಲು ಪ್ರಯತ್ನಿಸುತ್ತಿದ್ದೆನಾಗಿ ಅವರ ಮಾತುಗಳಿಗೆ ಒಪ್ಪಿಗೆ ನೀಡಿದ್ದೆ.ಮೊದಲು ಅವನು ನನ್ನ ಮೊಬೈಲ್ ನಿಂದ ಸೇವೆಯನ್ನು ಚಾಲನೆ ಮಾಡಲು ಪ್ರಯತ್ನಿಸಿದ, ಆಗ ಸೇವೆ ಚಾಲನೆ ಆಗದೆ ಹೋಗಲು ಅವನದೇ ಮೊಬೈಲ್ ಬಳಸಿದ್ದಾನೆ.
"ತನ್ನ ಅಂತರ್ಜಾಲ ಬ್ಯಾಂಕಿಂಗ್ ಸೇವೆಗಳನ್ನು ಸಕ್ರಿಯಗೊಳಿಸುವ ನಿಮಿತ್ತ, ಅಜ್ಞಾತ ಆರೋಪಿ ನನ್ನ ಮೊಬೈಲ್ ಗೆ ಬಂದಿದ್ದ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ)ಯನ್ನು ಬಹಿರಂಗಗೊಳಿಸಲು ಕೇಳಿದ್ದ. ಬಳಿಕ ನನ್ನ ಎಟಿಎಂ ಕಾರ್ಡ್ ತೆಗೆದುಕೊಂಡು ಅದನ್ನು ಸ್ಥಳದಲ್ಲಿದ್ದ ಎಟಿಎಂ ಮೆಷಿನ್ ನಲ್ಲಿ ಸ್ವೈಪ್ ಮಾಡಲು ಹೇಳಿದ್ದಾನೆ.ಬಳಿಕ ಆತ ಇಂಟರ್ ನೆಟ್ ಬ್ಯಾಂಕಿಂಗ್ ಗಾಗಿನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಗಳನ್ನು ರಚಿಸಿದ್ದು ಅದನ್ನು ನನಗೆ ನೀಡಿದ್ದನು.
"ಇದಾದ ಬಳಿಕ ಕೆಲ ದಿನಗಳ ಕಾಲ ಏನೊಂದು ವಿಶೇಷ ಸಂಗತಿ ನಡೆಯಲಿಲ್ಲ. ಆದರೆ ನಿವಾರದಂದು (ಜನವರಿ 12) 12.01ರ ಮದ್ಯರಾತ್ರಿಯ ಸಮಯಕ್ಕೆ ನನ್ನ ಮೊಬೈಲ್ ಗೆ ಎಚ್ಚರಿಕೆ ಸಂದೇಶ ಬಂದಿದೆ. ಅದರಲ್ಲಿ ಮೂರು ಆವೃತ್ತಿಗಳಲ್ಲಿ ನನ್ನ ಖಾತೆಯಲ್ಲಿದ್ದ `60,000 ರು. ವಿತ್ ಡ್ರಾ ಮಾಡಿಕೊಂಡಿರುವುದು ಪತ್ತೆಯಾಗಿದೆ. ನಾನು ಎಟಿಎಂ ಕಾರ್ಡ್ ನಿರ್ಬಂಧಿಸಿದ್ದಲ್ಲದೆ ಪೋಲೀಸರಿಗೆ ದೂರು ಸಲ್ಲಿಸಿದೆ" ಸತೀಶ್ ಪತ್ರಿಕೆಗೆ ವಿವರಿಸಿದರು.
ಸುರೇಶ್ ಹೇಳಿಜೆಯಂತೆ ಅವರ ಖಾತೆಯಿಂದ ಕೇವಲ 60 ಸಾವಿರ ರು.ಹಿಂಪಡೆಯಲಾಗಿದೆ. ಆದರೆ ಬ್ಯಾಂಕ್ ಹೇಳಿಕೆಯಂತೆ ಸುರೇಶ್ ಆನ್ ಲೈನ್ ಬ್ಯಾಂಕಿಂಗ್ ಸೇವೆ ಪ್ರಾರಂಭ ಮಾಡಿದಾಗಿನಿಂದ ಒಟ್ಟು  80,000 ರು. ಡ್ರಾ ಮಾಡಿದ್ದಾರೆ.
"ಅವರು ಎಟಿಎಂ ಒಳಗೆ ಇದ್ದ ಕಾರಣ ನಾನು ಅವರನ್ನು ನಂಬಿದ್ದೆನು. ತನಿಖೆಯ ನಂತರ, ಪೋಲೀಸರು ಆರೋಪಿಯು ಜಾರ್ಖಂಡ್ ನ ರೈಲು ನಿಲ್ದಾಣದಲ್ಲಿ ಹಣ ವಿತ್ ಡ್ರಾ ಮಾಡಿದ್ದಾರೆ ಎನ್ನುತ್ತಿದ್ದಾರೆ.ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪ್ರಕರಣವನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತನಿಖೆಗಾಗಿ ವರ್ಗಾಯಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT