ನಾನಿಂದು ಏನಾಗಿದ್ದೇನೋ ಇದಕ್ಕೆ ಶಿವಕುಮಾರ ಸ್ವಾಮಿಗಳ ಕೃಪೆ ಕಾರಣ: ಸಾಹಿತಿ ಕುಂ. ವೀರಭದ್ರಪ್ಪ
ಬೆಂಗಳೂರು: ನಾನು ಸಿದ್ದಗಂಗ ಮಠದ ವಿದ್ಯಾರ್ಥಿಯಾಗಿದ್ದೆ. ಎಸ್ಎಸ್ಎಲ್ ಸಿ ಬಳಿಕ ನಾನು ಮಠದಲ್ಲಿ ನನ್ನ ಶಿಕ್ಷಕ ತರಬೇತಿ ಕೋರ್ಸ್ ಮಾಡಿದೆ. ಕುಟುಂಬದಲ್ಲಿದ್ದ ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದಾಗಿ ನಾನು ಮಠದಲ್ಲಿ ಅಧ್ಯಯನ ಮಾಡಲು ಬಯಸಿದ್ದೆ. ಆದರೆ ಮಠದಲ್ಲಿ ಶಿಕ್ಷಣಕ್ಕಾಗಿ ಸೇರುವುದು ಸುಲಭವಾಗಿರಲಿಲ್ಲ. ನಾನು ಶಿವಕುಮಾರ ಸ್ವಾಮಿಜಿಯನ್ನು ಭೇಟಿಯಾಗಲು ಮತ್ತು ತನಗೆ ಮಠದಲ್ಲಿ ನಿಲ್ಲಲು ಅವಕಾಶ ನೀಡಬೇಕೆಂದು ಕೇಳಲು ನಿರ್ಧರಿಸಿದೆ.ಸ್ವಾಮಿಗಳನ್ನು ಮೆಚ್ಚಿಸುವುದಕ್ಕಾಗಿ ನಾನು ಭಾಮಿನಿ ಷಟ್ಪದಿ ಪದ್ಯಗಳನ್ನು ಹೇಳುತ್ತಿದ್ದೆ. ಹೀಗೆ ನನ್ನ ಹಾಗೂ ಮಠದ ಸಂಬಂಧ ಪ್ರಾರಂಭವಾಯಿತು ಎಂದು ಖ್ಯಾತ ಕಾದಂಬರಿಕಾರ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಹೇಳಿದರು. ಅವರು ಸಿದ್ದಗಂಗಾ ಶ್ರೀಗಳ ಜತೆಗಿನ ತಮ್ಮ ನಂಟನ್ನು ಪತ್ರಿಕೆ ಜತೆ ಹಂಚಿಕೊಂಡಿದ್ದಾರೆ.
"ನಾನು ಮುಂಚಿತವಾಗಿ ತಿಳಿಸದೆ ಸಿನಿಮಾಗೆ ಹೋದಾಗ, ರಾತ್ರಿ ತಡಬಾಗಿ ಕೋಣೆಗೆ ಆಗಮಿಸಿದ್ದ ಸಮಯವನ್ನು ನಾನು ನೆನೆಯಬಲ್ಲೆ.ನಾನು ರಾತ್ರಿ ತಡವಾಗಿ ಮಲಗಿದ್ದಾಗ ಬೆಳಿಗ್ಗೆ ಬೇಗನೇ ಏಳಲಾಗುತ್ತಿರಲಿಲ್ಲ. ಸ್ವಾಮಿಗಳು ಪ್ರತಿನಿತ್ಯ ಬೆಳಿಗ್ಗೆ 4.30ಕ್ಕೆ ನಮ್ಮ ಕೋಣೆಗಳತ್ತ ಬರುತ್ತಿದ್ದರು.ಸ್ವಾಮೀಜಿ ನಮ್ಮ ಬಳಿ ಬಂದು ಕೂಗುತ್ತಿದ್ದದ್ದು ನಮಗೆ ಕೇಳುತ್ತಿತ್ತು. ಅವರು ತಮ್ಮ ಪಾದುಕೆಗಳನ್ನೆತ್ತಿ ನಮ್ಮ ತಲೆ ಮೇಲೆ ಹೊಡೆದಾಗ ನಾನು ಏಳುತ್ತಿದ್ದೆ
"ಆದರೆ ಪಾದುಕೆಯ ಏಟು ನನಗೆ ನೋವು ತರುತ್ತಿರಲಿಲ್ಲ. ಕೋಟ್ಯಾಂತರ ಜನ ಅವರನ್ನು ಆರಾಧಿಸುತ್ತಿದ್ದರು. ಕಡೆಗೊಮ್ಮೆ ಇತರರು ನನಗೆ ಹೇಳಿದ್ದರು ಸ್ವಾಮೀಜಿ ಈ ಹಿಂದೆ ಜಿ.ಎಸ್. ಶಿವರುದ್ರಪ್ಪ ಅವರನ್ನು ಸಹ ಹೀಗೆಯೇ ಎಚ್ಚರಗೊಳಿಸುತ್ತಿದ್ದರು.ಆದರೆ ಶಿವರುದ್ರಪ್ಪ ತಾವು ಮುಂದೊಂದು ದಿನ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದರು.
"ನಾನು ಇಂದು ಏನೇ ಆಗಿದ್ದರೂ, ಸ್ವಾಮೀಜಿ ಮತ್ತು ಮಠ ಇದಕ್ಕೆ ಕಾರಣವಾಗಿದೆ. 1973-74ರಲ್ಲಿ ನಾನೇನಾದರೂ ಮಠದಲ್ಲಿ ಶಿಕ್ಷಕ ತರಬೇತಿ ಪಡೆಯದೇ ಹೋಗಿದ್ದರೆ ನಾನು ಒಂದೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ ಇಲ್ಲವೇ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದೆ.
"ಇಂದಿಗೂ ನಾನು ಮಠಕ್ಕೆ ತೆರಳಿ ಅಲ್ಲಿನ ಪಾತ್ರೆ, ತಟ್ಟೆಗಳನ್ನು ತೊಳೆಯುತ್ತೇನೆ. ಇದು ನನಗೆ ಬಹಳ ಸಂತೋಷವನ್ನು ನೀಡುತ್ತದೆ. ಮಠವು ನನಗೆ ಕೇವಲ ಶಿಕ್ಷಣವನ್ನಷ್ಟೇ ನೀಡಿದ್ದಲ್ಲ. ಪ್ರತಿ ರೀತಿಯಲ್ಲಿಯೂ ನನ್ನನ್ನು ರೂಪಿಸಿದೆ. ನನಗೆ ಆಹಾರದ ಬಗ್ಗೆ ಕಾಳಜಿ, ಜನರ ಮೇಲೆ ಪ್ರೀತಿ, ರಾಷ್ಟ್ರಪ್ರೇಮವನ್ನು ಕಲಿಸಿದೆ.ಇಂದು, ನೀವು ಜಗತ್ತಿನಲ್ಲಿ ಎಲ್ಲಿಗೇ ಹೋದರೂ ಅಲ್ಲಿ ಶ್ರೀಮಠದ ಕನಿಷ್ಟ ಒಬ್ಬ ವಿದ್ಯಾರ್ಥಿ ಇದ್ದೇ ಇರುತ್ತಾನೆ. ಇಂದು ಪ್ರತಿಯೊಬ್ಬರೂ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸುತ್ತಾರೆ.ಆದರೆ ಅವರ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳು ನಾವು ಈಗಾಗಲೇ 'ವಿಶ್ವ ರತ್ನ'ವನ್ನು ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಅವರ ಮೇಲೆ ಭಾರತ ರತ್ನ ಎನ್ನುವುದು ಮುಖ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ"
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos