ಶಿವಕುಮಾರ ಸ್ವಾಮೀಜಿ ಜೊತೆ ಎಲ್ .ಕೆ ಆಡ್ವಾಣಿ
ತುಮಕೂರು: ಸಿದ್ದಗಂಗಾ ಮಠದ ಶತಾಯುಷಿ ಶಿವಕುಮಾರ ಶ್ರೀಗಳ ಸಾವಿನಿಂದಾಗಿ ಅಪಾರ ಭಕ್ತಸಾಗರ ಶೋಕಸಾಗರದಲ್ಲಿ ಮುಳುಗಿದೆ.
ಕ್ಯಾತಸಂದ್ರದ ಮಹಿಳೆ ಅನ್ನಪೂರ್ಣಮ್ಮ ಶತಮಾನೋತ್ಸವ ಭವನದ ಬಳಿ ಕುಳಿತು ಕಣ್ಣೀರು ಹಾಕುತ್ತಿದ್ದರು, ಪ್ರತಿ ವರ್ಷ ಶ್ರೀಗಳು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ಗೋಶಾಲಾ ಸಿದ್ದೇಶ್ವರ ಸಭಾಂಗಣದಲ್ಲಿ ನಡೆಯುತ್ತಿತ್ತು.
ಗದಗದ ರೈತ ಸಂಗಪ್ಪ ಪಟ್ಟಣಶೆಟ್ಟಿ ಪ್ರತಿ ಸಲ ಈರುಳ್ಳಿ ಮಾರಾಟ ಮಾಡಲು ಬೆಂಗಳೂರಿಗೆ ಆಗಮಿಸಿದಾಗ ಮಿಸ್ ಮಾಡದೇ ಮಠಕ್ಕೆ ಬಂದು ಶ್ರೀಗಳ ದರ್ಶನ ಪಡೆದು ಹೋಗುತ್ತಿದ್ದರು. ಪ್ರತಿ ವರ್ಷ ಮಠಕ್ಕೆ ಬಂದು ಅವರ ದರ್ಶನ ಪಡೆದು ಹೋದರೇ ಅದೃಷ್ಟ ಎಂದು ನಂಬಿದ್ದರು. ಅದೊಂದು ಭರಿಸಲಾಗದ ನಷ್ಟ ಎಂದು ಹೇಳಿದ್ದಾರೆ.
ಬೆಂಗಳೂರಿನ ಲಕ್ಕಸಂದ್ರದ ಶಿವಮ್ಮ ಮುಂಜಾನೆ 5.45ಕ್ಕೆ ಬೆಂಗಳೂರು ಬಿಟ್ಟು, 7.30ಕ್ಕೆ ಮಠಕ್ಕೆ ಆಗಮಿಸುತ್ತಿದ್ದರು, ನನ್ನ ಇಬ್ಬರು ಹೆಣ್ಣಮಕ್ಕಳ ಮಕ್ಕಳು ಇಲ್ಲಿಯೇ ವ್ಯಾಸಂಗ ಮಾಡುತ್ತಿದ್ದಾರೆ. ಅವರು ನಮ್ಮನ್ನು ಅಗಲಿರುವುದು ಅಪಾರ ನಷ್ಟವಾಗಿದೆ.
ಬಾಗಲಕೋಟೆಯ ಸುಮಾರು 20 ಮಂದಿ ಶ್ರೀಗಳ ನಿಧನದ ನಂತರ ತುಮಕೂರಿಗೆ ಆಗಮಿಸಿದ್ದರು, ಬಡಮಕ್ಕಳ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸಿರುವ ನಡೆದಾಡುವ ದೇವರಾಗಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಎಲ್ಲಾ ಮಕ್ಕಳಿಗೂ ಅವರು ತಂದೆಯಾಗಿದ್ದರು, ಶಿವಕುಮಾರ ಸ್ವಾಮೀಜಿಗಳ ಪ್ರಪಂಚಕ್ಕೆ ಒಬ್ಬರೇ ,ಅವರ ರೀತಿ ಮತ್ತೊಬ್ಬರು ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics