ಮೈಸೂರು: ಸುಲಿಗೆಗಾಗಿ ನಾಟಕದ 'ಪೋಲೀಸ್' ಆಗಿದ್ದ ಯುವಕ ಜೈಲುಪಾಲು!
ಮೈಸೂರು: ತಾನು ಪೋಲೀಸ್ ಸಬ್ ಇನ್ಸ್ ಪೆಕ್ಟರ್, ಇಂಟೆಲಿಜೆನ್ಬ್ಸ್ ವಿಭಾಗಕ್ಕೆ ಸೇರಿದವನೆಂದು ಹೇಳಿಕೊಂಡು ವ್ಯಕ್ತಿಯೊಬ್ಬನನ್ನು ವಂಚಿಸಿದ್ದ 27 ವರ್ಷದ ಯುವಕನಾನ್ನು ಮೈಸೂರು ಪೋಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಿದ್ದಪ್ಪ ಚೆನ್ನಪ್ಪ ನ್ಯಾಮಕ್ಕನವರ್, ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ವನಹಳ್ಳಿ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಈತ ಬಾಡಿಗೆ ಕ್ಯಾಬ್ ಒಂದರಲ್ಲಿ ಮಂಗಳವಾರ ಮೈಸೂರಿಗೆ ಆಗಮಿಸಿದ್ದನು.
ಶಕ್ತಿ ನಗರದಲ್ಲಿರುವ ನಾರಾಯಣ ಗೌಡರ ಮನೆಗೆ ಖಾಕಿ ವಸ್ತ್ರ ತೊಟ್ಟು ಈತ ತೆರಳಿದ್ದಾನೆ.ನಾರಾಯಣ ಗೌಡರಿಗೆ ವಿಷಯ ತಿಳಿಯುವ ಮುನ್ನವೇ ಸಿದ್ದಪ್ಪ ತಾನು ಬೆಂಗಳೂರಿನಿಂದ ಬಂದಿದ್ದು ನಿಮ್ಮ ಮಗ ರೇಣುಕ ಗೌಡ ವಿರುದ್ಧ ದೂರು ದಾಖಲಾಗಿದೆ ಎಂದು ವಿವರಿಸಿದ್ದಾನೆ."ರೇಣುಕ ಗೌಡ ಪ್ರೀತಿ ಹೆಸರಿನಲ್ಲಿ ಅನೇಕ ಯುವತಿಯರಿಗೆ ಮೋಸ ಮಾಡಿದ್ದಾನೆ.ನಂತರ ತಲೆಮರೆಸಿಕೊಂಡಿದ್ದಾನೆ.ನಾನು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದು ನೀವು ನಿಮ್ಮ ಮಗನನ್ನು ನನಗೆ ಒಪ್ಪಿಸಿ" ನಕಲಿ ಪೋಲೀಸ್ ಅಧಿಕಾರಿ ಸಿದ್ದಪ್ಪ ಹೇಳಿದ್ದಾನೆ.
ಪೋಲೀಸರ ಭೇಟಿ ಬಗ್ಗೆ ಮಾಹಿತಿ ಪಡೆಯಲು ನಾರಾಯಣ ಗೌಡ ಪ್ರಯತ್ನಿಸಿದಾಗ ಮೊದಲು ನಿರ್ಲಕ್ಶಿಸಿದ ಸಿದ್ದಪ್ಪ ಬಳಿಕ ಹೊಸದೊಂದು ದೃಶ್ಯವನ್ನೇ ಸೃಷ್ಟಿಸಿದ್ದನು.ಆಗ ಸಿದ್ದಪ್ಪ ನೀವು 50,000 tರು. ನೀಡಿದರೆ ಪ್ರಕರಣ ಮುಚ್ಚಿ ಹಾಕುತ್ತೇವೆ, ಇಲ್ಲವಾದರೆ ನಿಮ್ಮ ಕುಟುಂಬವನ್ನೆಲ್ಲಾ ಠಾಣೆಗೆ ಕರೆಸಬೇಕಾಗುವುದು ಎಂದು ಬೆದರಿಕೆ ಹಾಕಿದ್ದಾನೆ. ಸಿದ್ದಪ್ಪನ ಈ ಬೆದರಿಕೆಗೆ ಮಣಿದ ನಾರಾಯಣ ಗೌಡ ಸದ್ಯ ಐದು ಸಾವಿರ ರು. ನೀಡಿ ಉಳಿದ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿ ತರುತ್ತೇನೆ ನೀವು ನಮ್ಮ ಮನೆ ಸಮೀಪವೇ ಕಾಯುತ್ತಿರಿ ಎಂದು ಹೇಳಿದ್ದಾರೆ.
ಈ ವೇಳೆ ನಾರಾಯಣ ಗೌಡಗೆ ನಕಲಿ ಪೋಲೀಸನ ಮೇಲೆ ಅನುಮಾನ ಬಂದಿದೆ. ಆತ ನೇರವಾಗಿ ಉದಯಗಿರಿ ಪೋಲೀಸ್ ಠಾಣೆಗೆ ತೆರಳಿ ಅಲ್ಲಿ ವಿಚಾರಿಸಿದ್ದಾರೆ. ಜತೆಗೆ ಕೆಲ ಪೋಲೀಸರನ್ನು ಸಹ ಕರೆದು ರ್ತಂದಾಗ ಅಸಲಿ ಪೋಲೀಸರು ಸಿದ್ದಪ್ಪನನ್ನು ವಿಚಾರಿಸಿದ್ದಾರೆ. ಆದರೆ ಸಿದ್ದಪ್ಪ ಆಗಲೂ ತಾನು ಗುಪ್ತಚರ ವಿಭಾಗಕ್ಕೆ ಸೇರಿದ ಪೋಲೀಸ್ ಎಂದೇ ಹೇಳಿಕೊಂಡಿದ್ದಾನೆ. ತಾನು ನಾರಾಯಣ ಗೌಡರ ಮಗನ ಕೇಸ್ ವಿಚಾರವಾಗಿ ಬೆಂಗಳೂರಿನಿಂಡ ಬಂದದ್ದಾಗಿಯೂ ಹೇಳಿದ್ದಾನೆ. ಆದರೆ ಪೋಲೀಸರಿಗೆ ಇವನ ವಾದ ದಲ್ಲಿ ಹುರುಳಿಲ್ಲ ಎಂದು ತಿಳಿದಿತ್ತು. ಕಡೆಗೆ ಆರೋಪಿ, ನಕಲಿ ಪೋಲೀಸ್ ಅಧಿಕಾರಿ ಸಿದ್ದಪ್ಪನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಆಗ ಸಿದ್ದಪ್ಪ ತಾನು ತಕ್ಷಣ ಭಾರೀ ಮೊತ್ತದ ಹಣ ಸಂಪಾದನೆ ಮಾಡಬೇಕೆಂದು ಆಸೆಯಿಂದ ಹೀಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೋಲೀಸರು ಸಿದ್ದಪ್ಪನನ್ನು ಬಂಧಿಸಿದ್ದಲ್ಲದೆ ಆತ ಪ್ರಯಾಣಿಸಿದ್ದ ಕ್ಯಾಬ್ ಸಹ ಜಪ್ತಿ ಮಾಡಿದ್ದಾರೆ.