ರಾಜ್ಯ

'ನಮ್ಮ ಮೆಟ್ರೋ'ದಲ್ಲಿ ಮತ್ತೊಂದು ದುರಂತ: ಅಜ್ಜಿ ತೋಳ್ತೆಕ್ಕೆಯಿಂದ ಜಾರಿ ಬಿದ್ದು ಮಗು ಸಾವು!

Raghavendra Adiga
ಬೆಂಗಳೂರು: "ನಮ್ಮ ಮೆಟ್ರೋ" ಹಳಿ ಮೇಲೆ ಯುಬ್ವಕನೊಬ್ಬ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮರೆಯುವ ಮುನ್ನವೇ ಇನ್ನೊಂದು ಅವಗಢ ಸಂಭವಿಸಿದೆ. ಎರಡು ವರ್ಷದ ಮಗುವೊಂದು ಎಸ್ಕಲೇಟರ್ ಮೇಲಿಂದ ಬಿದ್ದು ಸಾವನ್ನಪ್ಪಿರುವ  ಘಟನೆ ಬೆಂಗಳೂರು ಶ್ರೀರಾಂಪುರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಭಾನುವಾರ ರಾತ್ರಿ  8.15ರ ಸುಮಾರಿಗೆ ಈ ಘಟನೆ ನಡೆದಿದ್ದು ಗಾಯಾಳು ಹೆಣ್ಣು ಮಗು ಆಶಿನಿಯನ್ನು ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (ಐಜಿಐಟಿ) ಗೆ ಸೇರಿಸಿ ಚಿಕಿತ್ಸೆ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾಣದೆ ಮಗು ಮೃತಪಟ್ಟಿದೆ.
ಭಾನುವಾರ ರಾತ್ರಿ ಅಜ್ಜಿಯೊಡನೆ ಇದ್ದ ಮಗು ಎಸ್ಕಲೇಟರ್ ಇಳಿಯುತ್ತಿತ್ತು. ಅಜ್ಜಿ ಎತ್ತಿಕೊಂಡಿದ್ದ ಮಗು ಅಕಸ್ಮಾತ್ ಕೈ ಜಾರಿ ಕೆಳಗೆ ಬಿದ್ದಿದೆ.ಮಗು ಬೀಳುವುದನ್ನು ಕಂಡ ಮೆಟ್ರೋ ಸಿಬ್ಬಂದಿ ತಕ್ಷಣ ಎಸ್ಕಲೇಟರ್ ನಿಲ್ಲಿಸಿದ್ದಾರೆ. ಆದರೆ ಎತ್ತರದಿಂದ ಬಿದ್ದ ರಭಸಕ್ಕೆ ಮಗುವಿನ ತಲೆಗೆ ಭಾರೀ ಪೆಟ್ಟಾಗಿದೆ.ತಕ್ಷಣ ಅವಳನ್ನು ಮಲ್ಲೇಶ್ವರದ  ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ನಿಮ್ಹಾನ್ಸ್ ಗೆ ಕರೆದೊಯ್ದು ಅಲ್ಲಿಂದ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಶಿನಿ ತಂದೆ ಜಯಚಂದ್ರ ಖಾಸಗಿ ಶಾಲೆಯೊಇಂದರ ಸೆಕ್ಯೂರಿಟಿ ಗಾರ್ಡ್ ಆಗಿದ್ದರೆ ತಾಯಿ ವಾಣಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಘಟನೆಗೆ ಮೆಟ್ರೋ ಅಧಿಕಾರಿಗಳೇ ಹೊಣೆ ಎಂದು ವಾಣಿ ದೂರಿದ್ದಾರೆ. ಈ ಕುರಿತಂತೆ ಅವರು ಸುಬ್ರಮಣ್ಯನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಲು ಯೋಜಿಸಿದ್ದಾರೆ..
SCROLL FOR NEXT