ಹಾಸನ: ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸರ್ಕಾರಿ ಕಾರು ಬಳಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಇಂದು ಜಿಲ್ಲೆಯ ವಿವಿಧ ವಾರ್ಡ್ ಗಳಿಗೆ ಸರ್ಕಾರಿ ಕಾರಿನಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋವನ್ನು ಕರ್ನಾಟಕ ಬಿಜೆಪಿ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ, ಯಾರದೋ ಟ್ಯಾಕ್ಸ್ ದುಡ್ಡು, ದೇವೇಗೌಡ್ರ ಮೊಮ್ಮಕ್ಕಳ ಮೋಜು ಎಂದು ಟೀಕಿಸಲಾಗಿದೆ.