ರಾಜ್ಯ

ಪ್ರಯಾಣಿಕರ ಅನುಕೂಲಕ್ಕೆ ಬಸ್ ನಿಲ್ದಾಣಗಳಲ್ಲಿ ಮೊಬೈಲ್ ರ್ಯಾಂಪ್, ವೀಲ್ ಚೇರ್

Sumana Upadhyaya

ಚಿತ್ರದುರ್ಗ: ಬಸ್ಸು ಪ್ರಯಾಣವನ್ನು ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಸ್ನೇಹಪರವಾಗಿ ಮಾಡಲು ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯಾದ್ಯಂತ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮೊಬೈಲ್ ರ್ಯಾಂಪ್ಸ್ ಮತ್ತು ವೀಲ್ ಚೇರ್ ಗಳನ್ನು ಒದಗಿಸಲು ನಿರ್ಧರಿಸಿದೆ.

ನಿಲ್ದಾಣಗಳಲ್ಲಿ ಬಂದು ಹೋಗುವ  ವಿಕಲಾಂಗ ಮತ್ತು ಹಿರಿಯ ನಾಗರಿಕರ ಅನುಕೂಲಕ್ಕೆ ವೀಲ್ ಚೇರ್ ಮತ್ತು ಕೃತಕ ಮೆಟ್ಟಿಲುಗಳನ್ನೊಳಗೊಂಡ ಲೋಹದ ಮೆಟ್ಟಿಲುಗಳನ್ನು ಅಳವಡಿಸಲಾಗುತ್ತದೆ.

ರಾಜ್ಯ ರಸ್ತೆ ಸಾರಿಗೆ ನಿಗಮದ ಕೆಎಸ್ಆರ್ ಟಿಸಿ, ಎನ್ ಡಬ್ಲ್ಯು ಕೆಆರ್ ಟಿಸಿ, ಎನ್ ಇಕೆಆರ್ ಟಿಸಿ ಅಧಿಕಾರಿಗಳು ಈ ಸಂಬಂಧ ಕಳೆದ ಜನವರಿ 23ರಂದು ಎಲ್ಲಾ ವಿಭಾಗ ನಿಯಂತ್ರಣಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಲೋಹದ ರ್ಯಾಂಪ್ ಗಳು ಮತ್ತು ವೀಲ್ ಚೇರ್ ಗಳನ್ನು ಬಸ್ ಟರ್ಮಿನಲ್ ಗಳಲ್ಲಿ ಒದಗಿಸಬೇಕೆಂದು ಸೂಚಿಸಲಾಗಿದೆ. ಪ್ರಸ್ತುತ ಈ ಸೌಲಭ್ಯ ಹೊಸಪೇಟೆ ಮತ್ತು ಚಿತ್ರದುರ್ಗ ಬಸ್ ನಿಲ್ದಾಣಗಳಲ್ಲಿ ಲಭ್ಯವಾಗುತ್ತಿದೆ.

ಜಿಲ್ಲಾ ಮಟ್ಟದ ಬಸ್ ನಿಲ್ದಾಣಗಳಲ್ಲಿ 2 ವೀಲ್ ಚೇರ್ ಮತ್ತು ಎರಡು ಮೊಬೈಲ್ ರ್ಯಾಂಪ್ ಗಳು, ತಾಲ್ಲೂಕು ಕೇಂದ್ರಗಳ ಬಸ್ ನಿಲ್ದಾಣಗಳಲ್ಲಿ ಒಂದೊಂದು ವೀಲ್ ಚೇರ್ ಮತ್ತು ಮೊಬೈಲ್ ರ್ಯಾಂಪ್ ಗಳಿರುತ್ತವೆ. ಯಾವುದೇ ಬಸ್ ಗಳಲ್ಲಿ 24 ಮತ್ತು 25 ಸೀಟುಗಳನ್ನು ಮೀಸಲಿಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

SCROLL FOR NEXT